ಕೆಜೆಪಿ ಅಧಿಕಾರಕ್ಕೆತರಲು ಜನತೆ ಉತ್ಸುಕ
ಹಾವೇರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆನ್ನಿಗೆ ಚೂರಿ ಹಾಕಿದವರಿಗೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸುವ ಮೂಲಕ ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ತರುವಲ್ಲಿ ಮತ ಬಾಂಧವರು ಉತ್ಸುಕರಾಗಿದ್ದಾರೆ ಎಂದು ಹಾವೇರಿ ವಿಧಾನಸಭಾ ಮೀಸಲು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಾಜಿ ಶಾಸಕ ನೆಹರೂ ಓಲೇಕಾರ ಹೇಳಿದರು.
ಮೇ 5ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ನಾನು ಶಾಸಕನಾಗಿದ್ದ ಸಮಯದಲ್ಲಿ ನಗರದ ಎಲ್ಲ ಜನಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ಕಾರಣ ಮತಬಾಂಧವರು ಮತ್ತೊಮ್ಮೆ ತಮ್ಮ ಸೇವೆ ಮಾಡಲು ಪ್ರಸಕ್ತ ಚನಾವಣೆಯಲ್ಲಿ ಬಹುಮತಗಳಿಂದ ಆರಿಸಿ ತರಬೇಕೆಂದು ವಿನಂತಿಸಿಕೊಂಡರು.
ಇಲ್ಲಿನ ಕೆಜೆಪಿ ಕಚೇರಿಯಿಂದ ಆರಂಭವಾದ ರೋಡ್ ಶೋ, 8 ಹಾಗೂ 9ನೇ ವಾರ್ಡ್, ಶಿವಾಜಿನಗರ, ಅಶ್ವಿನಿನಗರ, ಬಸ್ ನಿಲ್ದಾಣ, ಜೆ.ಪಿ. ವೃತ್ತ, ಎಂ.ಜಿ. ರಸ್ತೆ, ಗೌರಿಗಲ್ಲಿ, ಅಕ್ಕಿಪೇಟೆ, ಸಂತೆ ಮೈದಾನ, ಯಾಲಕ್ಕಿ ಓಣಿ, ಶಿವಲಿಂಗನಗರ ಸಿದ್ದಪ್ಪ ವೃತ್ತ ಒಳಗೊಂಡು ಅನೇಕ ಬಡಾವಣೆಗಳಲ್ಲಿ ಅಂಗಡಿ ಮುಗ್ಗಟ್ಟು, ಮನೆಗಳಿಗೆ ತೆರಳಿ ಮತ ಯಾಚಿಸಿದರು.
ರೋಡ್ ಶೋದಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಅನಿತಾ ಸುಭ್ರಹ್ಮಣ್ಯ ಅವರ ಸಮ್ಮುಖದಲ್ಲಿ ಕೆಜೆಪಿ ಸೇರಿದರು.
ಕೆಜೆಪಿ ಜಿಲ್ಲಾ ವಕ್ತಾರ ಸುರೇಶ ಹೊಸಮನಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ ಮಲಗೋಡ, ನಗರಸಭೆ ಮಾಜಿ ಸದಸ್ಯ ವಿಜಯಕುಮಾರ ಚಿನ್ನಿಕಟ್ಟಿ, ನಗರಸಭೆ ಮಾಜಿ ವೀಪಕ್ಷ ನಾಯಕ ಬಾಬುಸಾಬ್ ಮೊಮಿನಗಾರ, ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆ.ಸಿ. ಕೋರಿ, ಮಂಜುನಾಥ ಓಲೇಕಾರ, ದೇವರಾಜ ಓಲೇಕಾರ, ಶಿವಬಸವ ಹೊನ್ನಳ್ಳಿ, ನಾಗರಾಜ ಬಸೇಗಣ್ಣಿ, ಅಶೋಕ ಬಣಕಾರ ಮತ್ತು ಸಹೋದರರು, ನಾಗರಾಜ ಹಿರೇಮಠ, ಚಂದ್ರಶೇಖರ ಹತ್ತಿ, ಸಾತಲಿಂಗಪ್ಪ ಉಜನಿಕೊಪ್ಪ, ಹನುಮಂತಪ್ಪ ದೇವಗಿರಿ, ಸಿ.ಎಸ್. ರಾಮನಗೌಡ, ವೀರಣ್ಣ ಸಂಗೂರ, ಮಲ್ಲಣ್ಣ ಹಂದ್ರಾಳ, ವೀರಣ್ಣ ನಂದಿ, ವೆಂಕಣ್ಣ ಚಪ್ಪರದ, ಕಬೀರ ಮಾಡಳ್ಳಿಕರ, ಇನ್ಕಿಲಾಬ ಮಾಡಳ್ಳಿಕರ, ರಿಯಾಜ್ ಅಹಮ್ಮದ ಶೆಡಿಕನಾಳ, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.