ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಣಕಾರ ಮತ ಯಾಚನೆ

Srinivasa Murthy VN
Updated On : 3 May 2013, 1:14 am

ಹಿರೇಕೆರೂರು: ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಪಟ್ಟಣದಲ್ಲಿ ಗುರುವಾರ ಬೃಹತ್ ಮೆರವಣಿಗೆ ಮೂಲಕ ಮತ ಯಾಚನೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಯು.ಬಿ. ಬಣಕಾರ ಪರ ಜೈಕಾರ ಹಾಕಿದರು. ಈ ವೇಳೆ ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಮಾತನಾಡಿ, ಕ್ಷೇತ್ರದ ಎಲ್ಲಾ ಹಳ್ಳಿಗೆ ಭೇಟಿ ನೀಡಿ ಪ್ರತಿಯೊಂದು ಮನೆಗೆ ತೆರಳಿ ಮತಯಾಚಿಸಿದ್ದೇನೆ ಎಂದರು. ಶಂಕರರಾವ್ ವೃತ್ತದಿಂದ ಆರಂಭವಾದ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಸರ್ವಜ್ಞ ವೃತ್ತದ ಮೂಲಕ ವಿಘ್ನೇಶ್ವರ ದೇವಸ್ಥಾನದವರೆಗೆ ಸಂಚರಿಸಿತು. ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ಜಿಪಂ ಸದಸ್ಯರಾದ ಪಾರ್ವತಿ ಚನ್ನಬಸಪ್ಪ ಭೋಗಾವಿ, ಸುಜಾತಾ ಕೊಟಗಿಮನಿ, ಶಾಂತಮ್ಮ ಆನಂದಪ್ಪ ಹಾದಿಮನಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಂಜಪ್ಪ ಗಿಡ್ಡಣ್ಣನವರ, ತಾಪಂ ಸದಸ್ಯರಾದ ಶಿವಣ್ಣ ಗಡಿಯಣ್ಣನವರ, ಚಂದ್ರ ಅಣ್ಣಪ್ಪನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಶಿವರಾಜ ಹರಿಜನ, ಯೂಸೂಫ್ ಖತೀಬ್, ಸಿದ್ದಪ್ಪ ಗುಡದಪ್ಪನವರ, ಹುಚ್ಚಪ್ಪ ಜಡಿಯಣ್ಣನವರ ಹಾಜರಿದ್ದರು.

ಬನ್ನಿಕೋಡ ಪ್ರಚಾರ
ಹಿರೇಕೆರೂರು:  ತಾಲೂಕಿನ ಮಾಸೂರು ಹಾಗೂ ರಟ್ಟೀಹಳ್ಳಿ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತ ಯಾಚನೆ ಮಾಡಿದರು.
ತಾಲೂಕಿನ ರಾಮತೀರ್ಥ, ಹಳೇಖಂಡೆಬಾಗೂರ, ಹೊಸಖಂಡೇಬಾಗೂರ, ಚಿಕ್ಕಮೊರಬ, ಹಿರೇಮೊರಬ, ಯಲಿವಾಳ, ಚಪ್ಪರದಹಳ್ಳಿ ಗ್ರಾಮಗಳಲ್ಲಿ ಆಯಾ ಗ್ರಾಮಗಳ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಬೆಂಬಲ: ಜಬೀಮುಲ್ಲಾ ಬೆಳಗಾವಿ, ಆಶೀಪ್ ಎಸ್, ನಸ್ರುಲ್ಲಾ ಡಾವಣಗೇರಿ, ತಾಜ್ ಪಾಟೀಲ, ವಾಸಿಮ್ ಶೇಖ್, ಜಬೀ ಹಳ್ಳೂರ, ತೌಸಿಫ್ ಕೊಡಮಗ್ಗಿ, ಜಬೀ ಮಕಾಂದಾರ, ಜಾವೀದ್ ಮಾಸೂರ, ಮುಜೀಬ್ ಪಠಾಣ, ಚಂದ್ರು ಕರಡಿ, ಮಂಜು ಬಾಗಲಕೋಟಿ ಬನ್ನಿಕೋಡ್ ಅವರನ್ನು ಬೆಂಬಲಿಸಿದರು.
ಈ ಸಂದರ್ಭ ಅಶೋಕ ಪಾಟೀಲ, ಗಂಗನಗೌಡ ಪಾಟೀಲ, ಬೂದೆಪ್ಪಗೌಡ ಭರಮಗೌಡ್ರ, ಎಲ್.ವಿ. ಸಂಕೊಳ್ಳಿ, ಶಂಕ್ರಗೌಡ ಪುಟ್ಟತಮ್ಮನವರ, ನಾರಾಯಣಪ್ಪ ಗೌರಕ್ಕನವರ, ವೀರಭದ್ರಪ್ಪ ದ್ಯಾವಕ್ಕಳವರ, ಹನುಮಂತಗೌಡ ಭರಮಗೌಡ್ರ, ಸೋಮಪ್ಪ ಕಣಕೊಟಗಿ, ಪ್ರಕಾಶ ಹೆಡಿಯಾಲ, ಸಂತೋಷ ಪಾಟೀಲ, ಬಸವರಾಜ ಹಂಸಭಾವಿ, ಎಚ್.ಎಸ್. ಕೋಣನವರ, ಜಿ.ವಿ. ಕುಲಕರ್ಣಿ, ಬಾಲಚಂದ್ರ ದೊಡ್ಡಯಂಕಣ್ಣನವರ, ಕೆಂಚಪ್ಪ ಕುರಿಯವರ, ವಿಜಯ್ ಮಡಿವಾಳರ, ಲೋಕಪ್ಪ ಬಣಕಾರ, ತೋಟೇಶಪ್ಪ ಹಳಕಟ್ಟಿ ಇತರರು ಉಪಸ್ಥಿತರಿದ್ದರು.

ಅಂಚೆ ಮತಪತ್ರಗಳ ಮೂಲಕ ಮತದಾನ
ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ನಿಮಿತ್ತ ಚುನಾವಣಾ ಕರ್ತವ್ಯದ ಮೇಲೆ ತೆರಳಿರುವ ಪೊಲೀಸ್ ಸಿಬ್ಬಂದಿಗೆ ಜಿಲ್ಲಾಡಳಿತದಿಂದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮೇ 1ರಂದು ಅಂಚೆ ಮತಪತ್ರದ ವಿಶೇಷ ನೆರವು ಕೇಂದ್ರ ತೆರೆಯಲಾಗಿತ್ತು. ಜಿಲ್ಲೆಯ ವಿವಿಧೆಡೆ ಚುನಾವಣಾ ಕರ್ತವ್ಯದ ಮೇಲೆ ತೆರಳಿರುವ 192 ಪೊಲೀಸ್ ಸಿಬ್ಬಂದಿಗಳು ವಿಶೇಷ ಆಸಕ್ತಿಯಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಅಂಚೆ ಮತಪತ್ರಕ್ಕಾಗಿ ನಮೂನೆ 12ನ್ನು ಸಲ್ಲಿಸಿದ ಇನ್ನುಳಿದ ಸಿಬ್ಬಂದಿಗಳಿಗೆ ಅಂಚೆಯ ಮೂಲಕ ಮತಪತ್ರ ರವಾನಿಸಿ, ಮತ ಚಲಾಯಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ.

ಗುಂಪು ಕಾರ್ಯಕ್ರಮನಡೆಸದಂತೆ ಸೂಚನೆ
ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2013ರ ಅಂಗವಾಗಿ ಮೇ 3ರ ಮಧ್ಯಾಹ್ನದ ನಂತರ ಮತದಾರ ಜಾಗೃತಿಗಾಗಿ ಬೀದಿ ನಾಟಕ, ಜಾಥಾ ಹಾಗೂ ಇನ್ನಿತರ ಜಾಗೃತಿ ಕಾರ್ಯಕ್ರಮದಲ್ಲಿ ಜನರನ್ನು ಗುಂಪುಗೂಡಿಸಿ ನೆರವೇರಿಸುವ ಕಾರ್ಯಕ್ರಮಗಳನ್ನು ಮಾಡಬಾರದು ಎಂದು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಉಮೇಶ ಕುಸುಗಲ್ಲ ಸೂಚಿಸಿದ್ದಾರೆ.

ಮದ್ಯ ಮಾರಾಟ,ಮದ್ಯಪಾನ ನಿಷೇಧ: ಡಿಸಿ
ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಹಿನ್ನೆಲೆಯಲ್ಲಿ ಮೇ 3ರಂದು ಸಂಜೆ 5 ಗಂಟೆಯಿಂದ  ಮೇ 5ರಂದು ರಾತ್ರಿ 11ರ ವರೆಗೆ ಹಾಗೂ ಮತ ಎಣಿಕೆ ದಿನವಾದ ಮೇ 8ರಂದು ಬೆಳಗ್ಗೆ 6ರಿಂದ ರಾತ್ರಿ 11 ಗಂಟೆವರೆಗೆ ಹಾವೇರಿ ಜಿಲ್ಲಾದ್ಯಂತ ಮದ್ಯ ಮಾರಾಟ, ಶೇಖರಣೆ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ. ಬಿಯರ್ ಬಾರ್ಗಳು, ಕ್ಲಬ್ಗಳು ಮತ್ತು ಮದ್ಯ ಡಿಪೋಗಳನ್ನು ಮುಚ್ಚಲು ಆದೇಶಿಸಲಾಗಿದ್ದು, ಈ ದಿನಗಳನ್ನು ಸೂಕ್ಷ್ಮ ದಿನಗಳೆಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇಂದು ಪ್ರಚಾರಕ್ಕೆ ತೆರೆ
ಹಾವೇರಿ: ವಿಧಾನಸಭಾ ಚುನಾವಣೆ- ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ವಿಧಿಗಳನ್ವಯ ಮೇ 3ರಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಗಳನ್ನು ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮುಕ್ತಾಯಗೊಳಿಸಬೇಕೆಂದು ಡಿಸಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments