ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾರ್ಮಿಕನ ಮಗನಿಗೆ ಐಎಎಸ್ ಪರೀಕ್ಷೆಯಲ್ಲಿ 32ನೇ ರ್ಯಾಂಕ್

ಕಾರ್ಮಿಕನ ಮಗನಾದ ಹಳ್ಳಿ ಹೈದನೊಬ್ಬ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 32ನೇ ರ್ಯಾಂಕ್ ಗಳಿಸಿದ್ದಾನೆ!

Srinivasa Murthy VN
Updated On : 18 May 2013, 11:44 am

ರಾಣಿಬೆನ್ನೂರು: ಕಾರ್ಮಿಕನ ಮಗನಾದ ಹಳ್ಳಿ ಹೈದನೊಬ್ಬ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 32ನೇ ರ್ಯಾಂಕ್ ಗಳಿಸಿದ್ದಾನೆ!
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕರೂರು ಗ್ರಾಮದ ನಿವಾಸಿ. ಇಲ್ಲಿನ ರಾಮ್ ಕೋ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ವಿಶ್ವನಾಥ ಕೆ.ಎಸ್. ಹಾಗೂ ಸುಲೋಚನಾ ದಂಪತಿ ಮಗನಾದ ಡಾ. ಕೆ.ವಿ. ರಾಜೇಂದ್ರ 2011-12ರಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 32ನೇ ರ್ಯಾಂಕ್ (1061 ಅಂಕಗಳು) ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.
ತಮ್ಮೂರಿನ ಹುಡುಗನೊಬ್ಬ ಇಂಥ ಸಾಧನೆ ಮಾಡಿದ್ದಕ್ಕೆ ಹರ್ಷಗೊಂಡಿರುವ ರಾಣಿಬೆನ್ನೂರು ತಾಲೂಕಿನ ಕರೂರು ಗ್ರಾಮದಿಂದ ಎರಡು ಕಿಮೀ ಅಂತರದ ಎಣ್ಣಿಹೊಸಳ್ಳಿ ಗ್ರಾಮದ ಗೆಳೆಯರು ಡಾ. ಕೆ.ವಿ. ರಾಜೇಂದ್ರ ಅವರನ್ನು ಮೇ 18ರಂದು ಸನ್ಮಾನಿಸಲು ವೇದಿಕೆ ಸಿದ್ಧಪಡಿಸಿ, ಮಿತ್ರನ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಡಾ. ಕೆ.ವಿ. ರಾಜೇಂದ್ರ ಅವರು ರಾಣಿಬೆನ್ನೂರು ತಾಲೂಕಿನ ಕರೂರು ಗ್ರಾಮದ ಸರಸ್ವತಿ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ, ಚಳಗೇರಿ ಗ್ರಾಮದ ಸಿಇಎಸ್ ಪ್ರೌಢಶಾಲೆಯಲ್ಲಿ ಪ್ರೌಢ, ಹರಿಹರದ ಎಸ್‌ಜೆವಿಪಿ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಬಳಿಕ ದಾವಣಗೆರೆ ಬಾಪೂಜಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದು ತಮ್ಮ ಮಿತ್ರರ ಸಹಕಾರದಿಂದ ಕೇರಳ ರಾಜ್ಯದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭಿಸಿದರು.
“ವೈದ್ಯಕೀಯ ಸೇವೆ ಮಾಡುತ್ತಿದ್ದಾಗಲೂ ಇನ್ನು ಹೆಚ್ಚಿನ ಅಭ್ಯಾಸ ಮಾಡಬೇಕೆಂಬ ಹಂಬಲವಿತ್ತು. ಅದರಲ್ಲೂ ಐಎಎಸ್ ಪರೀಕ್ಷೆ ಪಾಸಾಗಲೇಬೇಕೆಂಬ ತುಡಿತ ಮನದಲ್ಲಿತ್ತು. ರೋಗಿಗಳ ಸೇವೆ ಮಾಡುತ್ತಲೇ ಬಿಡುವು ಸಿಕ್ಕಾಗಲೆಲ್ಲ ಅಭ್ಯಸಿಸುತ್ತಾ, ಕೇಂದ್ರ ಲೋಕಸೇವಾ ಆಯೋಗ 2011-12ನೇ ಸಾಲಿನಲ್ಲಿ ನಡೆಸಿದ ಐಎಎಸ್ ಪರೀಕ್ಷೆ ಬರೆದೆ. ಅದರ ಪ್ರತಿಫಲವಾಗಿ ದೇಶಕ್ಕೆ 32ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ®ÛÑÛ¥æ§Þ«æ’ ಎನ್ನುತ್ತಾರೆ ಡಾ. ಕೆ.ವಿ. ರಾಜೇಂದ್ರ.
ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅಧ್ಯಯನ ಮಾಡುವಾಗ ನಮ್ಮೊಂದಿಗೆ ಓದಿ ಇಂದು ಐಎಎಸ್ ಪರೀಕ್ಷೆಯಲ್ಲಿ ಇಡೀ ದೇಶ, ರಾಜ್ಯ ನಮ್ಮ ಗ್ರಾಮಗಳತ್ತ ನೋಡುವಂತೆ ಸಾಧನೆ ಮಾಡಿದ ನಮ್ಮ ಗೆಳೆಯ ಡಾ. ಕೆ.ವಿ. ರಾಜೇಂದ್ರ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. ಅದಕ್ಕೆ ರಾಜೇಂದ್ರನನ್ನು ನಮ್ಮ ಗ್ರಾಮದ ಸಮಸ್ತ ಜನರ ಸಹಕಾರದೊಂದಿಗೆ ಮೇ 18ರಂದು ಸನ್ಮಾನಿಸಲು ವೇದಿಕೆ ಸಿದ್ಧಪಡಿಸಿದ್ದೇವೆ ಎನ್ನುತ್ತಾರೆ ಪ್ರಾಥಮಿಕ ಶಾಲೆ ಶಿಕ್ಷಕರಾದ ಜಗದೀಶ ಕೃಷ್ಣಪ್ಪನವರ, ಮಾಲತೇಶ ಕಡ್ಲಿಗೂಂದಿ, ಪರಮೇಶ ಚಳಗೇರಿ, ಜಯಪ್ಪ ಆವಕ್ಕನವರ, ಭೀಮೇಶ ಹೊಸಳ್ಳಿ.

- ಸಾಬಜಾನ್ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement