ರಾಣೇಬೆನ್ನೂರು: ನಗರದ ಬಿಜೆಪಿ ಕಚೇರಿಯಲ್ಲಿ ತಾಲೂಕು ಮತ್ತು ನಗರ ಘಟಕದ ವತಿಯಿಂದ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ ಮಾತನಾಡಿ, ಮುಂಬರುವ ಎಲ್ಲ ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ನಗರಸಭೆಯ ಉಪ ಚುನಾವಣೆಗೆ ಎಲ್ಲ ಕಾರ್ಯಕರ್ತರು ಒಟ್ಟಾಗಿ ಈಗಿನಿಂದಲೇ ಪಕ್ಷ ಸಂಘಟನೆಗೆ ಮತ್ತು ಜನಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನರೇಂದ್ರ ಮೋದಿಯವರ ಉತ್ತಮ ಆಡಳಿತದಿಂದ ದೇಶ ವಿಶ್ವದಲ್ಲಿಯೇ ಅಭಿವೃದ್ಧಿ ರಾಷ್ಟ್ರವಾಗುತ್ತಿದೆ ಎಂದರು. ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಅನೇಕ ತಾಲೂಕುಗಳಲ್ಲಿ ಸಮಸ್ಯೆಗಳ ಸುರಿಮಳೆಯಿದ್ದು, ಯಾವುದೇ ಪರಿಹಾರ ಕಂಡುಕೊಳ್ಳಲು ಸರ್ಕಾರದಿಂದ ಆಗುತ್ತಿಲ್ಲ. ಆದ್ದರಿಂದ ಬಿಜೆಪಿ ಕಾರ್ಯಕರ್ತರು, ಮುಖಂಡರು ಇದನ್ನು ಪ್ರತಿಭಟಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಬೇಕು ಎಂದರು. ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ್‌ಗೆ ಸನ್ಮಾನಿಸಲಾಯಿತು. ಪಕ್ಷದ ಜಿಲ್ಲಾ ಉಸ್ತುವಾರಿ ಮಹೇಶ ತೆಂಗಿನಕಾಯಿ, ಜಿಲ್ಲಾಧ್ಯಕ್ಷ ಬೋಜರಾಜ ಕರೂದಿ, ರಾಜ್ಯ ಕಾರ್ಯದರ್ಶಿ ಭಾರತಿ ಜಂಬಗಿ, ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ, ಮಾಜಿ ಶಾಸಕ ಜಿ. ಶಿವಣ್ಣ, ತಾಲೂಕಾಧ್ಯಕ್ಷ ಬಸವರಾಜ.ಪಿ. ಲಕ್ಷೇಶ್ವರ, ನಗರ ಘಟಕಾಧ್ಯಕ್ಷ ವೀರಣ್ಣ ಅಂಗಡಿ, ಡಾ. ಬಿ.ಎಸ್. ಕೇಲಗಾರ, ಸಿದ್ದರಾಜ ಕಲಕೋಟಿ, ಸಂಕಪ್ಪ ಮಾರನಾಳ, ಗಂಗಾಧರ ಮಲೇಬೆನ್ನೂರ, ವಿಶ್ವನಾಥ ಪಾಟೀಲ, ಮೈಲಪ್ಪ ಗುಡಗೂರ, ಕೆ. ಶಿವಲಿಂಗಪ್ಪ, ಎ.ಬಿ. ಪಾಟೀಲ ಇದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಚಿಕ್ಕಬಿದರಿ ಸ್ವಾಗತಿಸಿದರು. ನಗರ ಪ್ರಧಾನ ಕಾರ್ಯದರ್ಶಿ ಪ್ರವೀಣ ಕೋಪರ್ಡೆ ನಿರೂಪಿಸಿದರು.