6ರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಫೆ. 6ರಿಂದ 14ರ ವರೆಗೆ ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ.
ಫೆ. 6ರ ಸಂಜೆ 6.30ಕ್ಕೆ ಸುತ್ತೂರಿನ ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಹೋತ್ಸವಕ್ಕೆ ಚಾಲನೆ ನೀಡುವರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ಸಚಿವ ಸಿ.ಎಂ. ಉದಾಸಿ, ವಿ. ಸೋಮಣ್ಣ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಕಪ್ಪಣ್ಣನವರು, ಸೋಮಣ್ಣ ಬೇವಿನಮರದ, ಶಂಕರಗೌಡ ಪಾಟೀಲ ಪಾಲ್ಗೊಳ್ಳುವರು. ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಲೋಕೇಶ ಅಗಸನಕಟ್ಟೆ ಉಪನ್ಯಾಸ ನೀಡುವರು.
ಫೆ. 7ರ ಸಂಜೆ 6.30ಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಶ್ರೀ, ಶಿರಹಟ್ಟಿ ಫಕ್ಕೀರೇಶ್ವರ ಮಠದ ಜಗದ್ಗುರು ಫಕ್ಕೀರ ಸಿದ್ಧರಾಮ ಶ್ರೀ ಆಶೀರ್ವಚನ ನೀಡುವರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಡಾ. ಶ್ರೀನಾಥ ದೀಕ್ಷಿತ್, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಶಾಸಕರಾದ ರುದ್ರಪ್ಪ ಲಮಾಣಿ, ಡಿ.ಜಿ. ಶಾಂತನಗೌಡರ ಪಾಲ್ಗೊಳ್ಳುವರು. ಲೇಖಕಿ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಶಿವನಕೆರೆ ಬಸವಲಿಂಗಪ್ಪನವರ ಉಪನ್ಯಾಸ ನೀಡುವರು.
ಫೆ. 8ರಂದು ಸಂಜೆ 6.30ಕ್ಕೆ ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸವಣೂರಿನ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಸಂಸದರಾದ ಅನಂತಕುಮಾರ, ಜನಾರ್ಧನಸ್ವಾಮಿ, ಕವಿವಿ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ, ಸಾಹಿತಿ ಮನು ಬಳಿಗಾರ್, ಶಾಸಕ ಮನೋಹರ ತಹಶೀಲ್ದಾರ್ ಭಾಗವಹಿಸುವರು. ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ ಉಪನ್ಯಾಸ ನೀಡುವರು.
ಫೆ. 9ರ ಸಂಜೆ 6.30ಕ್ಕೆ ಶಿಗ್ಗಾಂವಿ ವಿರಕ್ತಮಠದ ಸಂಗನ ಬಸವ ಸ್ವಾಮೀಜಿ, ಸವಣೂರಿನ ಮಹಾಂತ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಸಾಹಿತಿ ರಾಘವೇಂದ್ರ ಪಾಟೀಲ, ಆರ್.ಟಿ. ಮಜ್ಜಗಿ, ಶಾಸಕರಾದ ಕೆ.ಬಿ. ಕೋಳಿವಾಡ, ಯು.ಬಿ. ಬಣಕಾರ ಪಾಲ್ಗೊಳ್ಳುವರು. ಚಿಂತಕ ಡಾ. ರಂಜಾನ ದರ್ಗಾ, ಪ್ರಾಧ್ಯಾಪಕ ಡಾ. ಬಿ.ವಿ. ವಸಂತಕುಮಾರ್ ಉಪನ್ಯಾಸ ನೀಡುವರು.
ಫೆ. 10ರ ಸಂಜೆ 6.30ಕ್ಕೆ ರಾಜನಹಳ್ಳಿ ಪ್ರಸನ್ನಾನಂದ ಸ್ವಾಮೀಜಿ, ಕೂಡ್ಲದ ಗುರುನಂಜೇಶ್ವರ ಶಿವಾಚಾರ್ಯರು, ಸೈಯದ್ ಷಾ ಮುರ್ತುಜಾ ಹುಸೈನಿ ಹಾಷ್ಮಿ ಆಶೀರ್ವಚನ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ್ ಹುಕ್ಕೇರಿ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಕೆ.ಎಸ್. ಪುಟ್ಟಣ್ಣಯ್ಯ, ಸಿ.ಟಿ. ರವಿ, ಅರವಿಂದ ಬೆಲ್ಲದ ಭಾಗವಹಿಸುವರು. ಪ್ರೊ. ಇಟಗಿ ಈರಣ್ಣ, ಬಸವರಾಜ ರಾಜಗುರು ಉಪನ್ಯಾಸ ನೀಡುವರು.
ಫೆ. 11ರ ಸಂಜೆ 6.30 ಕ್ಕೆ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದಪುರಿ ಆಶೀರ್ವಚನ ನೀಡುವರು. ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಜಾನಪದ ವಿವಿ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ, ಜಲಸಂರಕ್ಷಣಾ ತಜ್ಞ ಎನ್.ಜೆ. ದೇವರಾಜ ರೆಡ್ಡಿ, ಶಾಸಕ ವಿನಯ ಕುಲಕರ್ಣಿ, ಜಿಪಂ ಸದಸ್ಯ ರಾಜೇಂದ್ರ ಹಾವೇರಣ್ಣನವರ ಪಾಲ್ಗೊಳ್ಳುವರು. ಪತ್ರಕರ್ತರಾದ ಡಾ. ಸರಜೂ ಕಾಟ್ಕರ್, ಬಿ.ಎಂ. ಹನೀಫ್ ಉಪನ್ಯಾಸ ನೀಡುವರು.
ಫೆ. 12ರಂದು ಸಂಜೆ 6.30ಕ್ಕೆ ಬಾಲೇಹೊಸೂರ ಮಠದ ದಿಂಗಾಲೇಶ್ವರ ಸ್ವಾಮೀಜಿ, ಹುಲಗೂರಿನ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡುವರು.
ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಕಾನೂನು, ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ, ಸಚಿವ ಎಸ್.ಆರ್. ಪಾಟೀಲ, ಡಾ. ಬಿ.ಎಲ್. ಶಂಕರ್, ವಿಟಿಯು ಕುಲಪತಿ ಡಾ. ಎಚ್. ಮಹೇಶಪ್ಪ, ಶಾಸಕ ಸಿ.ಎಸ್. ಶಿವಳ್ಳಿ ಭಾಗವಹಿಸುವರು. ಡಾ. ಹೇಮಾ ಪಟ್ಟಣಶೆಟ್ಟಿ, ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ ಉಪನ್ಯಾಸ ನೀಡುವರು.
ಫೆ. 13ರ ಸಂಜೆ 6.30ಕ್ಕೆ ಹರಿಹರದ ಜಗದ್ಗುರು ಸಿದ್ಧಲಿಂಗೇಶ್ವರ ಸ್ವಾಮೀಜಿ, ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡುವರು. ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕವಿ ಚೆನ್ನವೀರ ಕಣವಿ, ಕೈಗಾರಿಕೋದ್ಯಮಿ ವಿಜಯ ಸಂಕೇಶ್ವರ, ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ್, ವಡ್ನಾಳ್ ರಾಜಣ್ಣ ಪಾಲ್ಗೊಳ್ಳುವರು. ಪ್ರಾಧ್ಯಾಪಕಿ ಡಾ. ತಮಿಳ್ ಸೇಲ್ವಿ, ಸಾಹಿತಿ ಸುಧಾ ಬರಗೂರ ಉಪನ್ಯಾಸ ನೀಡುವರು.
ಫೆ. 14ರಂದು ಬೆಳಗ್ಗೆ 9 ಗಂಟೆಗೆ ಶರಣ ಧ್ವಜಾರೋಹಣ ನಡೆಯಲಿದೆ. ಸವಣೂರ ಉಪವಿಭಾಗಾಧಿಕಾರಿ ಕೋಟೆಪ್ಪ ಗೋಳ ಪಾಲ್ಗೊಳ್ಳುವರು. 11 ಗಂಟೆಗೆ ತರಳುಬಾಳು ಜಗದ್ಗುರು ನಿಧಿ-ವಾರ್ಷಿಕ ಮಹಾಸಭೆ, ಕಡೂರ ತರಳಬಾಳು ಹುಣ್ಣಿಮೆ ಮಹೋತ್ಸವದ ಲೆಕ್ಕಪತ್ರ ಮಂಡನೆ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಸಂಜೆ. 5.30ರ ವರೆಗೆ ಶಿಗ್ಗಾಂವಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತರಳಬಾಳು ಜಗದ್ಗುರು ಬೃಹನ್ಮಠದ ಸಕಲ ಬಿರುದಾವಳಿಗಳೊಂದಿಗೆ ಡಾ. ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳ (ವಾಹನದ ಮೇಲೆ) ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 6ರಿಂದ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ತೋಟಗಾರಿಕೆ ಸಚಿವ ಡಾ. ಶಾಮನೂರ ಶಿವಶಂಕರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಸಂಸದ ಜಿ.ಎಂ. ಸಿದ್ದೇಶ್ವರ್, ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಪಾಲ್ಗೊಳ್ಳುವರು. ಡಾ. ಶಂಭು ಬಳಿಗಾರ ಉಪನ್ಯಾಸ ನೀಡುವರು. ಪ್ರತಿದಿನ ಸಂಜೆ ವಿವಿಧ ಶಾಲಾ ಕಾಲೇಜು ಹಾಗೂ ಕಲಾ ತಂಡಗಳಿಂದ ವಚನ ಸಂಗೀತ, ನಾಡಗೀತೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಮಹೋತ್ಸವದ ನಿಮಿತ್ತ ಕೃಷಿ ಮೇಳ, ಕನಕದಾಸ ಮಹಾಮಂಟಪದಲ್ಲಿ ಕೃಷಿ ವಸ್ತುಪ್ರದರ್ಶನ, ಜಾನುವಾರು ಪ್ರದರ್ಶನ, ಕೃಷಿ ಗೋಷ್ಠಿಗಳು ನಡೆಯಲಿವೆ.