ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಹಿರೇಕೆರೂರ: ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯಲ್ಲಿ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಶನಿವಾರ ಜರುಗಿತು. ತಾಲೂಕಿನ ವಿವಿಧ ಪ್ರಾಥಮಿಕ ಶಾಲೆಗಳ ಒಟ್ಟು 1060 ವಿದ್ಯಾರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರವನ್ನು ಪಡೆದಿದ್ದರು. ಇದಕ್ಕಾಗಿ ಮೂರು ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ 1ನೇ ಕೇಂದ್ರವಾದ ಎಸ್ಎನ್ಕೆದಲ್ಲಿ 360 ವಿದ್ಯಾರ್ಥಿಗಳಲ್ಲಿ 9 ಗೈರು, 2ನೇ ಕೇಂದ್ರ ಡಿಆರ್ಟಿನಲ್ಲಿ 360ರಲ್ಲಿ 6 ಗೈರು ಹಾಗೂ 3ನೇ ಕೇಂದ್ರ ಸಿಇಎಸ್ನಲ್ಲಿ 340ರಲ್ಲಿ 17 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದು, ಒಟ್ಟು 32 ಮಕ್ಕಳು ಪರೀಕ್ಷೆಗೆ ಗೈರು ಉಳಿದಿದ್ದು, 1028 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆ ಸುಗಮವಾಗಿ ಸಾಗಲು 3 ಕೇಂದ್ರ ಪರಿವೀಕ್ಷಕರು, 60 ಕೊಠಡಿ ಮೇಲ್ವಿಚಾರಕರು ಹಾಗೂ ಬಿಇಓ ಎಂಸಿ ಆನಂದ, ನೋಡಲ್ ಅಧಿಕಾರಿ ಪಿ.ಬಿ. ನಿಂಗನಗೌಡ್ರ, ಮುಖ್ಯ ಅಧೀಕ್ಷಕ ಎನ್. ಸುರೇಶಕುಮಾರ ಪರೀಕ್ಷೆಯ ಉಸ್ತುವಾರಿ ವಹಿಸಿದ್ದರು.
11ರಂದು ಪುಣ್ಯತಿಥಿ
ಹಾವೇರಿ: ತಾಲೂಕಿನ ದೇವಗಿರಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯ ಸಂಸ್ಥಾಪಕ ದಿ. ಡಾ. ಆರ್.ಎಫ್. ಪಾಟೀಲ ಅವರ 38ನೇ ಪುಣ್ಯತಿಥಿಯನ್ನು ಫೆ. 11ರಂದು ಆಚರಿಸಲಾಗುತ್ತಿದೆ. ಪುಣ್ಯತಿಥಿಯನ್ನು ಶಾಲೆಯಲ್ಲಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರೌಢಶಾಲೆ ಮುಖ್ಯಾಧ್ಯಾಪಕರು ಕೋರಿದ್ದಾರೆ.
ಶಿವಾನಂದಪ್ಪ ಕುಬಸದ ನಿಧನ
ಹಿರೇಕೆರೂರ: ಪಟ್ಟಣದ ಶಿವಾನಂದಪ್ಪ ಪುಟ್ಟಪ್ಪ ಕುಬಸದ (73) ಫೆ. 8ರಂದು ನಿಧನರಾಗಿದ್ದಾರೆ. ಮೃತರು ಪಟ್ಟಣದ ನ್ಯೂಸ್ ಪೇಪರ್ ಏಜೆಂಟರಾಗಿ ಹಲವಾರು ವರ್ಷದಿಂದ ಸೇವೆ ಸಲ್ಲಿಸಿದ್ದರು. ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು, ಪತ್ನಿ ಸೇರಿದಂತೆ ಮೊಮ್ಮಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಜರುಗಿತು. ತಾಲೂಕು ಪತ್ರಕರ್ತರ ಸಂಘ, ಪತ್ರಿಕಾ ಏಜೆಂಟರು, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ.