ಅಟ್ಯಾ-ಪಟ್ಯಾ ಎರಡೂ ಪ್ರಶಸ್ತಿ ಪಾಂಡಿಚೇರಿ ಪಾಲು
ಕನ್ನಡಪ್ರಭ ವಾರ್ತೆ, ನರಗುಂದ, ಮಾ. 16
ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಮೈದಾನದಲ್ಲಿ ಮಾಧ್ಯಮಿಕ ನೌಕರರ ಸಂಘ, ತಾಲೂಕು ದೈಹಿಕ ಶಿಕ್ಷಕರ ಸಂಘ, ರಾಜ್ಯ ಅಟ್ಯಾ-ಪಟ್ಯಾ ಸಂಘದಗಳ ಆಶ್ರಯದಲ್ಲಿ ಮಾ. 14ರಿಂದ 16ರ ವರೆಗೆ ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಏರ್ಪಡಿಸಿದ್ದ ದಕ್ಷಿಣ ವಲಯ ಮಟ್ಟದ ಅಟ್ಯಾ-ಪಟ್ಯಾ ಪಂದ್ಯಾವಳಿಯಲ್ಲಿ ಕರ್ನಾಟಕ, ತಮಿಳನಾಡು, ಕೇರಳ, ಪಾಂಡಿಚೇರಿ ಸೇರಿ ಒಟ್ಟು 4 ತಂಡಗಳು ಸೇರಿ ಪುರುಷ-ಮಹಿಳಾ 160 ಆಟಗಾರರು ಭಾಗವಹಿಸುವ ಮೂಲಕ ನೋಡುಗರ ಹಾಗೂ ಅಭಿಮಾನಿಗಳ ಮನ- ತಣಿಸಿತು.
ಈ ಪಂದ್ಯಾವಳಿಯನ್ನು ರಾಜ್ಯ ಅಟ್ಯಾ-ಪಟ್ಯಾ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಪಂದ್ಯಗಳು ಪ್ರಾರಂಭವಾದಾಗಿನಿಂದ ಪುರುಷ-ಮಹಿಳಾ ತಂಡಗಳಲ್ಲಿ ನಾಲ್ಕೂ ರಾಜ್ಯದ ತಂಡಗಳು ಪ್ರಬಲವಾಗಿದ್ದರಿಂದ ಈ ನಾಲ್ವರಲ್ಲಿ ಯಾರು ಪ್ರಶಸ್ತಿಯನ್ನು ಪಡೆಯುವರ ಎಂಬ ಕುತೂಹಲ ಪ್ರೇಕ್ಷಕರಲ್ಲಿತ್ತು. ಆದರೆ, ಭಾನುವಾರ ಜರುಗಿದ ಪುರಷರ ಪೈನಲ್ ಪಂದ್ಯದಲ್ಲಿ ಪಾಂಡಿಚೇರಿ-ತಮಿಳನಾಡು ತಂಡಗಳಲ್ಲಿ ಪಾಂಡಿಚೇರ ತಂಡವು ಹೆಚ್ಚು ಅಂಕ ಪಡೆದು ಪ್ರಶಸ್ತಿ ಪಡೆದುಕೊಂಡರೆ, ಮಹಿಳೆಯರ ಫೈನಲ್ ಪಂದ್ಯದಲ್ಲಿ ಕರ್ನಾಟಕ-ಪಾಂಡಿಚೇರಿ ತಂಡಗಳಲ್ಲಿ ಪಾಂಡಿಚೇರಿ ತಂಡ ಪ್ರಶಸ್ತಿ ಪಡೆದದಿದ್ದರಿಂದ ಪಾಂಡಿಚೇರಿಯ ಪುರುಷ-ಮಹಿಳಾ ತಂಡಗಳು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವು.
ಈ ಸಂದರ್ಭದಲ್ಲಿ ಡಾ. ವಿ.ಡಿ. ಪಾಟೀಲ, ಚನ್ನಬಸಪ್ಪ ಕಂಠಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ, ಎಸ್.ಬಿ. ಪಾಟೀಲ, ಎಂ.ಆರ್. ಪಾಟೀಲ, ಶಹಜಾನ ಮುದಕವಿ ಮುಂತಾದವರು ಉಪಸ್ಥಿತರಿದ್ದರು.