ಪರಿಶ್ರಮದಿಂದ ಗುರಿ ಸಾಧಿಸಿ
ಸವಣೂರು: ವಿದ್ಯಾರ್ಥಿಗಳು ಪರಿಶ್ರಮದಿಂದ ಓದಿ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆಯಬೇಕು. ಮುಂದೆ ಗುರಿ ಇದ್ದರೆ ಹಿಂದೆ ಗುರು ಇರುತ್ತಾನೆ. ಇದನ್ನು ಅರ್ಥೈಸಿಕೊಂಡು ಜೀವನದಲ್ಲಿ ಶಿಕ್ಷಕರು ಹಾಗೂ ತಂದೆ-ತಾಯಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ಖಚಿತ ಎಂದು ಶಿವಾನಂದ ಬಡಶೆಟ್ಟಿ ಹೇಳಿದರು. ನಗರದ ಗುರು ರಾಚೋಟೇಶ್ವರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಜೆ.ಸಿ. ಕುರಂದವಾಡ ಮಾತನಾಡಿ, ಮಕ್ಕಳು ಪರೀಕ್ಷೆಯನ್ನು ಸಮಚಿತ್ತದಿಂದ ಎದುರಿಸಬೇಕು. ಪ್ರಶ್ನೆ ತಿಳಿದುಕೊಂಡು ಉತ್ತರ ಬರೆಯಲು ಏಕಾಗ್ರತೆ ಹಾಗೂ ಆಸಕ್ತಿ ಅವಶ್ಯ. ತಾವು ಬಂಗಾರದಂತ ಜೀವನ ಪಡೆಯಲು ಪರೀಕ್ಷೆಯನ್ನು ಒಂದು ಸಾಧನವಾಗಿ ಇಟ್ಟುಕೊಂಡು ಉತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಹಾಗೂ ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು. ಮುಖ್ಯೋಪಾಧ್ಯಾಯ ಕೆ.ಎಸ್. ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಹಬೂಬಿ ಸೌದಾಗರ, ಸಿದ್ದಪ್ಪ ನಿಂಬರಗಿ, ರಾಜೇಶ್ವರಿ ಬುಶೆಟ್ಟಿ, ಸರಸ್ವತಿ ಸಾತಪತಿ, ಮಂಜುನಾಥ ಗಾಣಿಗೇರ ಹಾಗೂ ಶಿಕ್ಷಕರಾದ ಎ.ವಿ. ಕಮ್ಮಾರ, ಡಿ.ಎಸ್. ಬಾಳಿಕಾಯಿ, ಶ್ರೀನಿವಾಸ ಜಿ.ಎಂ., ಆದಮ್ಮನವರ ಇತರರು ಇದ್ದರು. ಎನ್.ಎನ್. ಬಸನಾಳ ನಿರೂಪಿಸಿದರು. ಆರ್.ಡಿ.ನಧಾಫ್ ಸ್ವಾಗತಿಸಿದರು. ಬಿ.ಎಚ್. ಗಾಣಿಗೇರ ವಂದಿಸಿದರು.
ಗುರುವಂದನೆ ಕಾರ್ಯಕ್ರಮ
ಹಾವೇರಿ: ಹಾನಗಲ್ಲ ತಾಲೂಕಿನ ಗುಡ್ಡದಮತ್ತಿಹಳ್ಳಿ ಗ್ರಾಮ ದೇವತೆ ಸಭಾಭವನದಲ್ಲಿ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ವತಿಯಿಂದ ಇತ್ತೀಚಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಕ ವಿ.ಡಿ. ದುಂಡಿ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ, ಅದನ್ನು ಸಾಧಿಸುವ ಮೂಲಕ ಪಾಲಕರ ಹಾಗೂ ಶಿಕ್ಷಕರ ಋಣ ತೀರಿಸಲು ಶ್ರಮಿಸಬೇಕು ಎಂದರು. ಎನ್.ಎಸ್. ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ದುಂಡಿಯವರ, ಎನ್.ಎಸ್. ಕಮ್ಮಾರ, ಎ.ವಿ. ಇಂಗಳೆ, ಆರ್.ಬಿ. ನಾಯಕ, ಎಫ್.ವಿ. ವೈಕುಂಠೆ, ಸುಂಕದ ಯಾವಗಲ್, ಗಿರಿಯಪ್ಪನವರ ಕಾಳಿ, ಎಸ್.ಎಸ್. ಮಠ, ನಾಡಗೌಡ್ರ, ಬುಡ್ಡಮವರ, ಎಂ.ಸಿ. ಯಲಿ, ವೀರಭದ್ರಪ್ಪ ಮತ್ತಿಹಳ್ಳಿ, ರುದ್ರಪ್ಪ ಗೂರನವರ, ಎಸ್.ಎಸ್. ಕಮ್ಮಾರ, ಜಿ.ಬಿ. ಹಾವೇರಿ, ಎಸ್.ಬಿ. ಬಣಕಾರ, ಎಚ್.ಟಿ. ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು. ಸಹದೇವಪ್ಪ ಹಾವೇರಿ, ಮಾರ್ತಾಂಡಪ್ಪ ಹಾವೇರಿ, ಗಣೇಶಪ್ಪ ಭಜಂತ್ರಿ, ತಿರಕನಗೌಡ ಪಾಟೀಲ, ಹನುಮಂತಪ್ಪ ಭಜಂತ್ರಿ ಇದ್ದರು. ಫಕ್ಕೀರೇಶ ಕಾಳೆ ವರದಿ ವಾಚಿಸಿದರು. ಬಸವರಾಜ ಕೊರಗರ ಮಾತನಾಡಿದರು. ಎಂ.ಎನ್. ಚೌಡಕ್ಕನವರ ನಿರೂಪಿಸಿದರು. ಅರುಣ ಕೊರಗರ ಪ್ರಾರ್ಥಿಸಿದರು. ನಾಗರಾಜ ಕೊರಗರ ಸ್ವಾಗತಿಸಿದರು.