ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮನೆ ಮನೆಗೆ ಬಿಜೆಪಿ

Srinivasa Murthy VN
Updated On : 17 Mar 2014, 11:08 am

ಹಾವೇರಿ:  ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಬಿಜೆಪಿ ಹಮ್ಮಿಕೊಂಡಿರುವ ಮನೆ ಮನೆಗೆ ಬಿಜೆಪಿ ಕಾರ್ಯಕ್ರಮಕ್ಕೆ ಭಾನುವಾರ ನಗರದಲ್ಲಿ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.
ಬಿಜೆಪಿ ಹಾವೇರಿ ಶಹರ ಘಟಕದಿಂದ ಇಜಾರಿ ಲಕಮಾಪುರ ನಗರದ ದುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಉದಾಸಿ, ಪಕ್ಷದ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರೊಂದಿಗೆ ಮನೆ, ಮನೆಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ, ಮಾಜಿ ಶಾಸಕ ನೆಹರು ಓಲೇಕಾರ, ಶಿವರಾಜ ಸಜ್ಜನರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಗಂಗಾಧರ ಮಲೇಬೆನ್ನೂರ, ರಾಜ್ಯ ಸಮಿತಿ ಸದಸ್ಯ ನಾಗೇಂದ್ರ ಕಟಕೋಳ, ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಕರಬಸಮ್ಮನವರ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳ್ಳೂರು, ತಾಲೂಕು ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ಶಹರ ಘಟಕದ ಅಧ್ಯಕ್ಷೆ ಜ್ಯೋತಿ ಸಾತೇನಹಳ್ಳಿ, ನಗರಸಭಾ ಸದಸ್ಯ ಸುರೇಶ ದೊಡ್ಡಮನಿ, ಹನುಮಂತಪ್ಪ ದೇವಗಿರಿ, ಇರ್ಫಾನ್ ಪಠಾನ, ಶಿವಬಸವ ವನಹಳ್ಳಿ, ಲಲಿತಾ ಗುಂಡೇನಹಳ್ಳಿ, ಗೀತಾ ಜುಜಗಾಂವ, ಜಗದೀಶ ಮಲಗೋಡ, ಕರಬಸಪ್ಪ ಹಳದೂರ, ಸತೀಶ ಹಾವೇರಿ, ಪರಶುರಾಮ ಮೈಲಾರಪ್ಪನವರ, ಮಾಜಿ ಸದಸ್ಯರಾದ ಗಿರೀಶ ತುಪ್ಪದ, ಮಂಜುನಾಥ ಪುತಳೇಕರ, ಜಿಲ್ಲಾ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ತಿಪ್ಪಶೆಟ್ಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಸೌಭಾಗ್ಯಾ ಹಿರೇಮಠ, ರತ್ನಾ ಕಾಸಪ್ಪನವರ, ಸೋಮಶೇಖರ ಕುರಡೇಕರ, ಸಂತೋಷ ಆಲದಕಟ್ಟಿ, ವೇದವ್ಯಾಸ ಕಟ್ಟಿ, ಶಿವಬಸಪ್ಪ ಹಲಗಲಿ, ಸಂಜೀವ ಪುತಳೇಕರ, ಹನುಮಂತಪ್ಪ ನೂಕಾಪುರ, ಫಕ್ಕಿರೇಶ ಹುರಳಿಕುಪ್ಪಿ, ಶ್ರೀಪಾದ ಬೆಟಗೇರಿ, ವೆಂಕಟೇಶ ದೈವಜ್ಞ, ಪ್ರಕಾಶ ಉಜ್ಜನೀಕೊಪ್ಪ, ಸುರೇಶ ಹೊಸಮನಿ, ಅಲ್ಲಾಭಕ್ಷ ತಿಮ್ಮಾಪುರ, ಗಫಾರ ನದಾಫ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement