ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಲುವೆ ಕಾಮಗಾರಿ ಸ್ಥಗಿತ

Srinivasa Murthy VN
Updated On : 26 Mar 2014, 12:06 pm

ಬ್ಯಾಡಗಿ:  ನಗರೋತ್ಥಾನ ಯೋಜನೆಯಡಿ ನಡೆಯತ್ತಿರುವ ಕಾಮಗಾರಿಗಳಿಗೆ ಗ್ರಹಣ ಹಿಡಿದಂತಿದೆ, ಪಟ್ಟಣದ ವಿದ್ಯಾನಗರದಲ್ಲಿ ನಡೆಯುತ್ತಿರುವ ಹೊಂಡದ ಕಾಲುವೆ ಕಾಮಗಾರಿ ಕಳಪೆ ಎಂದು ಆರೋಪಿಸಿ ಕೆಲ ಸಾರ್ವಜನಿಕರು ಕೆಲಸ ಸ್ಥಗಿತಗೊಳಿಸಿದ ಘಟನೆ ಮಂಗಳವಾರ ನಡೆಯಿತು.
ಕಾಮಗಾರಿ ಕಳಪೆ ಎಂದು ಆರೋಪಿಸಿ ಈ ಹಿಂದೆ ಮೂರ್ನ್ಕಾಲ್ಕು ಬಾರಿ, ಪುರಸಭೆ ಚುನಾಯಿತ ಸದಸ್ಯರೇ ಬೀದಿಗಿಳಿದು ಹೋರಾಟ ಮಾಡಿದ್ದರು. ಆದರೆ, ಈ ಬಾರಿ ಸಾರ್ವಜನಿಕರು ಕಳಪೆ ಎಂದು ಆರೋಪಿಸಿ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಂಗವಿಕಲರ ಸಂಘದ ತಾಲೂಕಾಧ್ಯಕ್ಷ ಪಾಂಡು ಸುತಾರ, ಕಾಮಗಾರಿಯಲ್ಲಿ ಬಳಕೆ ಮಾಡುತ್ತಿರುವ ಕಬ್ಬಿಣ ಕಳಪೆ ಗುಣಮಟ್ಟದಾಗಿದೆಯಲ್ಲದೇ ಕಟ್ಟಡಕ್ಕೆ ಬಳಸುತ್ತಿರುವ ಮರಳಿನಲ್ಲಿ ಸಂಪೂರ್ಣ ಮಣ್ಣು ಮಿಶ್ರತವಾಗಿದೆ. ಇಂತಹ ಮರಳು ಬಳಕೆ ಮಾಡುವುದರಿಂದ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದರು. ಕೋಟ್ಯಂತರ ವೆಚ್ಚದಲ್ಲಿ ನಗರೋತ್ಥಾನ ಕಾಮಗಾರಿಯು ಮುಂಬೈನ ಈಗಲ್ ಕನಸ್ಟ್ರಕ್ಷನ್ ಇವರು ಗುತ್ತಿಗೆ ಪಡೆದಿದ್ದಾರೆ. ಆದರೆ, ಈಗಲ್ ಕನಸ್ಟ್ರಕ್ಷನ್ ಕಾಮಗಾರಿ ಖುದ್ದಾಗಿ ನಿರ್ವಹಿಸದೇ ಸ್ಥಳೀಯರೊಬ್ಬರಿಗೆ ಉಪಗುತ್ತಿಗೆ ನೀಡಿದ್ದು ಕಾಮಗಾರಿ ಕಳಪೆಯಾಗಲು ಕಾರಣವೆಂದು ಆರೋಪಿಸಿದರು. ನಿಯಮಾನುಸಾರ ಉಪಗುತ್ತಿಗೆ ನೀಡಲು ಅವಕಾಶವಿಲ್ಲ ಹೀಗಿದ್ದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.  ಕಾಮಗಾರಿ ಸ್ಥಗಿತಗೊಳಿಸಿದ ಸುದ್ದಿತಿಳಿದು ಘಟನಾ ಸ್ಥಳಕ್ಕಾಗಮಿಸಿದ ಪುರಸಭೆ ಅಭಿಯಂತರ ನಿರ್ಮಲಾ ನಾಯ್ಕ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲು ಕೆಲಕಾಲ ತಡಕಾಡಿದರು. ಮರಳನ್ನು ಪರೀಕ್ಷಿಸಿ ಮಣ್ಣು ಮಿಶ್ರಿತ ಮರಳನ್ನು ಕೂಡಲೇ ತೆರವುಗೊಳಿಸುವಂತೆ ಕೆಲಸಗಾರರಿಗೆ ಸೂಚಿಸಿದರಲ್ಲದೇ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳು ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಪ್ರತ್ಯೇಕ ಎಂಜಿನಿಯರ್ ನೇಮಕವಾಗಿದ್ದು ದೂರವಾಣಿ ಮೂಲಕ ಸಂಪರ್ಕಿಸುವುದಾಗಿ ತಿಳಿಸಿ ಸ್ಥಳದಿಂದ ಕಾಲ್ಕಿತ್ತರು. ಪುರಸಭೆ ಸದಸ್ಯ ಮಂಜುನಾಥ ಭೋವಿ, ಮಹ್ಮದ್‌ಲಿ ಜಿನ್ನಾ, ಮಂಜುನಾಥ ಪೂಜಾರ ಇನ್ನಿತರರು ಉಪಸ್ಥಿತರಿದ್ದರು.

ಶಿಗ್ಗಾಂವಿ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಶಿಗ್ಗಾಂವಿ:  ಪುರಸಭೆಯ ನೂತನ ಅಧ್ಯಕ್ಷರಾಗಿ ಶ್ರೀಕಾಂತ ಬುಳ್ಳಕ್ಕನವರ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಶಂಕ್ರವ್ವ ಅಂದಲಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಶ್ರೀಕಾಂತ ಬುಳ್ಳಕ್ಕನವರ 16 ಮತ ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸದಾಶಿವಪ್ಪ ಕಂಕನವಾಡ ಕೇವಲ 9 ಮತಪಡೆದು ಸೋಲು ಕಂಡರು.
ಎಸ್‌ಸಿ ಮಹಿಳಾ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಶಂಕ್ರವ್ವ ಅಂದಲಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement