ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

26 ಅಭ್ಯರ್ಥಿಗಳಿಂದ 41 ನಾಮಪತ್ರ ಸಲ್ಲಿಕೆ

Srinivasa Murthy VN
Updated On : 27 Mar 2014, 10:39 am

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ 14 ಅಭ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆಯಾಗಿದ್ದು, ಈವರೆಗೆ 26 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿವೆ.
ಉಮೇದುವಾರಿಕೆ ಸಲ್ಲಿಸಲು ಬುಧವಾರ ಕೊನೆಯ ದಿನವಾದ್ದರಿಂದ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಆವರಣ ಅಭ್ಯರ್ಥಿಗಳಿಂದ ಭರ್ತಿಯಾಗಿತ್ತು. ಒಬ್ಬರಾದ ಮೇಲೆ ಒಬ್ಬರಂತೆ ಮಧ್ಯಾಹ್ನ 3 ಗಂಟೆಯಾದರೂ ಅಭ್ಯರ್ಥಿಗಳ ನಾಮಪತ್ರ ಸ್ವೀಕಾರ ಪೂರ್ಣಗೊಳ್ಳಲಿಲ್ಲ. ಕೊನೆ ಕ್ಷಣದೊಳಗೆ ಅಲ್ಲಿ ಹಾಜರಿದ್ದ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಲಾಯಿತು. ಕೊನೆಯ ದಿನವೇ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಹಾವೇರಿ ತಾಲೂಕಿನ ಸಂಗೂರ ಗ್ರಾಮದ ಹಾಲಪ್ಪ ತಿಮ್ಮೇನಹಳ್ಳಿ ಪಕ್ಷೇತರ(2) ಹಾಗೂ ಬಹುಜನ ಸಮಾಜ ಪಕ್ಷ(1), ಸಲೀಂ ಅಹ್ಮದ್ ಅವರು ಕಾಂಗ್ರೆಸ್‌ನಿಂದ (4), ಗದಗ ತಾಲೂಕು ಕಿರಿಟಗೇರಿಯ ಸುರೇಶ ಮುಂಡರಗಿ ಅವರು ರಾಣಿ ಚನ್ನಮ್ಮ ಪಕ್ಷದಿಂದ(1) ನಾಮಪತ್ರ ಸಲ್ಲಿಸದ್ದು, ಹಾನಗಲ್ಲ ತಾಲೂಕು ಬಮ್ಮನಹಳ್ಳಿಯ ಶಿದ್ದಪ್ಪ ಪೂಜಾರ(1), ಹಾವೇರಿಯ ಗಿರೀಶಗೌಡ ಬಿಷ್ಟನಗೌಡ್ರ(2), ಹಾವೇರಿ ತಾಲೂಕು ಕರ್ಜಗಿಯ ವಿರುಪಾಕ್ಷಪ್ಪ ಬಿದರಗಡ್ಡಿ(1), ಶಿಗ್ಗಾಂವಿ ತಾಲೂಕು ಹಿರೇಬೆಂಡಿಗೇರಿಯ ಮೆಹಬೂಖಾನ್ ಪಠಾಣ(1), ಗದಗ ತಾಲೂಕು ಕಲ್ಲೂರ ಅಶೋಕಪ್ಪ ಮಲ್ಲಪ್ಪ ಜವಳಿ(1) ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.
ಮುಂಡರಗಿ ತಾಲೂಕು ಡಂಬಳದ ಡಿ. ಪ್ರಸಾದ ಅವರು ಆರ್‌ಪಿಐ(ಎ) ಪಕ್ಷದಿಂದ(1), ರೋಣ ತಾಲೂಕು ಇಟಗಿಯ ಶಖಿಲಾಬಾನು ದರಗಾದ (1) ಹಾಗೂ ರುದ್ರೇಶ ಹಡಗಲಿ(1) ಪಕ್ಷೇತರರಾಗಿ, ಬ್ಯಾಡಗಿ ತಾಲೂಕು ಮೊಟೇಬೆನ್ನೂರಿನ ಬಸವಂತಪ್ಪ ಹುಲ್ಲತ್ತಿ ಸರ್ವ ಜನತಾ ಪಕ್ಷದಿಂದ(1) ಹಾಗೂ ರಾಣಿಬೆನ್ನೂರಿನ ಜಗದೀಶ ಯಲಿಗಾರ ಅವರು ಪಕ್ಷೇತರರಾಗಿ (1) ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯಕ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement