ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಂಗ್ರೆಸ್‌ನಿಂದ ಅಭಿವೃದ್ಧಿ ಶೂನ್ಯ: ಸಿ.ಎಂ. ಉದಾಸಿ

Srinivasa Murthy VN
Updated On : 27 Mar 2014, 10:40 am

ಹಾನಗಲ್ಲ:  ಭಾರತ ನಿರ್ಮಾಣದ ಕುರಿತು ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ತನ್ನ ಸುದೀರ್ಘ 55 ವರ್ಷಗಳ ಕಾಲದ ಆಡಳಿತಾವಧಿಯಲ್ಲಿ ನಿದ್ದೆ ಮಾಡುತ್ತಿತ್ತೇ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಪ್ರಶ್ನಿಸಿದರು.
ತಾಲೂಕಿನ ಆಡೂರು ಗ್ರಾಮದಲ್ಲಿ ಆಯೋಜಿಸಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚನೆ ಮತ್ತು ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಬಹು ಕಾಲದವರೆಗೆ ಕಾಂಗ್ರೆಸ್‌ನವರು ಆಡಳಿತ ನಡೆಸಿದ್ದಾರೆ. ಆದರೆ, ದೇಶದ ಅಭ್ಯುದಯಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ. ಸುಮಾರು ರು. 8 ಲಕ್ಷ ಕೋಟಿ ಹಗರಣವೆಸಗಿ ಮಹಾತ್ಮಾ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿಯ ಕನಸನ್ನು ನುಚ್ಚುನೂರು ಮಾಡಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲಬೇಕಿದೆ ಎಂದು ಲೇವಡಿ ಮಾಡಿದರು. ಪ್ರತಿಮ ದೇಶಭಕ್ತ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು. ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಗಳಿಂದ ಭಾರತ ವಿನಾಶದತ್ತ ಮುಖ ಮಾಡಿದೆ. ಆಡಳಿತದ ಎಲ್ಲ ಹಂತಗಳಲ್ಲಿಯೂ ವಿಫಲಗೊಂಡಿದೆ ಎಂದರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಬಿಜೆಪಿ ಹಾನಗಲ್ಲ ತಾಲೂಕು ಅಧ್ಯಕ್ಷ ವೀರಣ್ಣ ನಿಂಬಣ್ಣನವರ, ಜಿಪಂ ಸದಸ್ಯ ಬಸವರಾಜ ಹಾದಿಮನಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಗ್ರಾಪಂ ಅಧ್ಯಕ್ಷೆ ವಿಮಲಾಕ್ಷಿ ಗೋಣಗೇರ, ಉಪಾಧ್ಯಕ್ಷ ಶಾಂತಪ್ಪ ತಿಪಲಾಪುರ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರ, ಮಿಯ್ಯಾಜಾನ ಕಂಬಳಿ, ಮುಖಂಡರಾದ ಡಾ. ಕೆ.ಎಸ್. ಕುಲಕರ್ಣಿ, ರಮೇಶ ಕಳಸೂರ, ಎಸ್.ವಿ. ಸಂಗೂರಮಠ, ಎಸ್.ಆರ್. ಹಂಚಿನಮನಿ, ಹೊನ್ನಪ್ಪ ಕಡೇರ, ಎಂ.ಬಿ. ಹೋತನಹಳ್ಳಿ, ಕಿರಣ ಅಗಸಿಮನಿ, ರತ್ನವ್ವ ಕರೆವ್ವನವರ, ಮೆಹಬೂಬಅಲಿ ಕರಕುಮಿಯಾನವರ, ನಾಗಪ್ಪ ಅಂಬಿಗೇರ, ಪುಟ್ಟಪ್ಪ ದೇವರಪೂಜಿ, ಮಾರುತಿ ನಿಕ್ಕಂ, ಮಾಲತೇಶ ಆರೇರ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಆಡೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಂಚಿನೆಗಳೂರು, ಶೀಗಿಹಳ್ಳಿ, ಸಿಂಗಾಪುರ, ಹಿರೇಹುಲ್ಲಾಳ, ಉಪ್ಪುಣಸಿ, ಹೇರೂರು, ಕೂಸನೂರು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ಬಿಜೆಪಿ ಪರ ಪ್ರಚಾರ ಕೈಗೊಂಡು, ಮತಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement