ಬ್ರಹ್ಮಾವರ: ಕೊರಗ ಸಮುದಾಯದಂತಹ ಹಿಂದುಳಿದ ಸಮಾಜದ ಜನತೆಯಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿ, ಅವರಲ್ಲಿರುವ ದುಶ್ಚಟಗಳನ್ನು ದೂರ ಮಾಡಿ, ಸಮಾಜದಲ್ಲಿ ಅವಕಾಶಗಳನ್ನು ಒದಗಿಸಿ ಮುಖ್ಯವಾಹಿನಿಗೆ ತರಲು ಎನ್.ಎಸ್.ಎಸ್. ಶಿಬಿರಾರ್ಥಿಗಳು ಪ್ರಯತ್ನಿಸಬೇಕು ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಕರೆ ನೀಡಿದ್ದಾರೆ.
ಕುಂಭಾಶಿ ಆನೆಗುಡ್ಡೆ ವಿನಾಯಕ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸ.ಪ್ರ.ದ. ಕಾಲೇಜು ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ಪ್ರೊ. ವಸಂತರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಜೇಂದ್ರ ಕುಮಾರ್ ನಾಯಕ್, ಕೋಟದ ಉದ್ಯಮಿ ಆನಂದ್ ಸಿ. ಕುಂದರ್, ಕುಂಭಾಷಿಯ ಕೊರ್ಗಿ ವಿಠಲ ಶೆಟ್ಟಿ, ಐ.ಟಿ.ಡಿ.ಪಿ.ಯ ಯೋಜನಾ ಸಮನ್ವಯಾಧಿಕಾರಿ ಡಾ. ಉದಯ ಶೆಟ್ಟಿ, ಕುಂಭಾಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ಪುತ್ರನ್, ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಶಾಲಾಭಿವೃದ್ಧಿ ಸಮಿತಿಯ ಅಣ್ಣಯ್ಯ ಪುತ್ರನ್, ಶಿಬಿರದ ಯೋಜನಾಧಿಕಾರಿ ಮಂಜುನಾಥ ಆಚಾರಿ, ಘಟಕದ ನಾಯಕರಾದ ಶ್ರವಣ ಡಿ. ನಾಯಕ್, ವಿವೇಕ್, ಸುಮಾ, ಸಹನಾ ಇದ್ದರು.
ಶಿಬಿರದ ಯೋಜನಾಧಿಕಾರಿ ರವಿಪ್ರಸಾದ್ ಕೆ.ಜಿ., ಶಿಬಿರಾರ್ಥಿಗಳಾದ ಮಂಜುಳಾ, ಶೈಲಜಾ ಮತ್ತು ಪ್ರಸಾದ್ ಅನುಭವ ಹಂಚಿಕೊಂಡರು.
ವಿದ್ಯಾರ್ಥಿ ವಿವೇಕ್ ಸ್ವಾಗತಿಸಿದರು. ಸಹನಾ ವಂದಿಸಿದರು. ಸುಮಾ ಕಾರ್ಯಕ್ರಮ ನಿರೂಪಿಸಿದರು.