ಅವ್ಯವಹಾರ ಖಾತ್ರಿ: ಕ್ರಮಕ್ಕೆ ಸೂಚನೆ
ತಾಳಿಕೋಟೆ: ಸಮೀಪದ ಭಂಟನೂರ ಗ್ರಾಪಂ ನಿವೃತ್ತ ಪಿಡಿಒ ಎಸ್.ಸಿ. ಮುಳ್ಳೂರ ಹಾಗೂ ಮಾಜಿ ಅಧ್ಯಕ್ಷೆ ಕಮಲಾಕ್ಷಿ ದತ್ತಣ್ಣ ದೇಸಾಯಿ (ಕಿರೇದಳ್ಳಿ) ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 3 ಕಾಮಗಾರಿಗೆ ಸಂಬಂಧಪಟ್ಟಂತೆ ಅವ್ಯವಹಾರ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ಸಂಬಂಧಪಟ್ಟ 4,67,193 ಹಾಗೂ ಪ್ರಕರಣ ತನಿಖೆಯ ಖರ್ಚು 10 ಸಾವಿರ ವಸೂಲು ಮಾಡುವಂತೆ ಜಿಲ್ಲಾ ಪಂಚಾಯಿತಿ ಓಂಬುಡ್ಸಮನ್ ಆದೇಶ ನೀಡಿದ್ದಾರೆ. ನಿವೃತ್ತ ಪಿಡಿಒ ಹಾಗೂ ಮಾಜಿ ಅಧ್ಯಕ್ಷರು ಖಾತೆಯಲ್ಲಿ ಹಣ ಇಲ್ಲದೇ 53 ಕಾಮಗಾರಿಗಳಿಗೆ 68,18,222 ಚೆಕ್ ನೀಡಿದ್ದಲ್ಲದೆ 3 ಕಾಮಗಾರಿಗಳಿಗೆ ಯಾವುದೇ ದಾಖಲಾತಿ ಇಲ್ಲದೇ ಹಣ ಪಾವತಿ ಮಾಡಿದ್ದರಿಂದ ಹಣದ ಅವ್ಯವಹಾರ ನಡೆಸಿದ್ದಕ್ಕೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆಯೂ ಆದೇಶ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.