ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಜನಸ್ಪಂದನದಲ್ಲಿ ಅಧಿಕಾರಿಗಳ ತರಾಟೆ

Parashurama
Updated On : 3 Feb 2013, 11:45 am

ಪಾಂಡವಪುರ: ತಾಲೂಕಿನ ಸುಂಕಾತೊಣ್ಣೂರು ಗ್ರಾಮ ಪಂಚಾಯಿತಿ ಅವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಮಹಾಪೂರವೇ ಹರಿದು ಬಂತು. ಅದೇ ರೀತಿ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ಜನಸ್ಪಂದನ ಸಭೆ ನಡೆಸುವ ಉದ್ದೇಶ ಜನರ ಸಮಸ್ಯೆ ನಿವಾರಿಸಲು ಅಥವಾ ಬರಿ ಭರವಸೆ ನೀಡಿ ಹೋಗುವುದಕ್ಕೆ ಜನಸ್ಪಂದನ ಸಭೆ ನಡೆಸುತ್ತೀರಿ ಎಂದು ಗ್ರಾಮದ ಯುವ ಮುಖಂಡ ಮೋಹನ್‌ಲಿಂಗೇಶ್ವರ ಗಂಭೀರ ಆರೋಪಿಸಿದರು.
ಕಳೆದ ಜನಸ್ಪಂದನ ಸಭೆಯಲ್ಲಿ ಭರವಸೆ ನೀಡಿದ ಕೆಲಸಅಗಿಲ್ಲ. ಈಗ ಮತ್ತೆ ಬಂದಿದ್ದೀರಿ. ನಾವು ನಿಮಗೆ ಸಮಸ್ಯೆ ಹೇಳುತ್ತೇವೆ. ನೀವು ಕೇಳಿಕೊಂಡು ಹೋಗುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ. ಇದರ ಬಗ್ಗೆ ಹಲವು ಬಾರಿ ದೂರು ನೀಡಿದರೂ ತನಿಖೆ ಮಾಡಿಲ್ಲ. ರಸಗೊಬ್ಬರ ಸೇರಿದಂತೆ ಹಲವು ವಸ್ತುಗಳನ್ನು ನ್ಯಾಯಯುತವಾಗಿ ಕೊಡುತ್ತಿಲ್ಲ. ಇದರಿಂದ ರೈತರಿಗೆ ಸಮಸ್ಯೆ ಅಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಪಾಪಣ್ಣ ಹಾಗೂ ತಾಪಂ ಅಧ್ಯಕ್ಷ ಎಚ್. ಎಂ. ರಾಮಕೃಷ್ಣ ಮಾತನಾಡಿ, ವಿಎಸ್‌ಎಸ್‌ಎನ್‌ಬಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಾನೂನು ರೀತಿ ಕ್ರಮ ಜರುಗಿಸಿಲಿದ್ದಾರೆ. ತಪ್ಪಿಸ್ಥರಿಗೆ ಕಾನೂನು ರೀತಿ ಶಿಕ್ಷೆ ಅಗಲಿದೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಂ. ರಾಮಕೃಷ್ಣ ಮಾತನಾಡಿ, ಜನಸ್ಪಂದನ ಕಾರ್ಯಕ್ರಮದ ಉದ್ದೇಶ ಗ್ರಾಮೀಣ ಪ್ರದೇಶ ಜನರ ಸಮಸ್ಯೆ ಬಗೆಹರಿಸುವುದೇ ಆಗಿದೆ. ಅದರೆ, ಜನತೆ ಸರ್ಕಾರದ ಯೋಜನೆಗಳ ಬಗ್ಗೆ ಅರಿತು ಯೋಜನಗಳ ಸದ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಹರೀಶ್‌ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯ ಲಕ್ಷ್ಮಿ, ಪಾರ್ಥಸಾರಥಿ ಗ್ರಾಪಂ ಉಪಾಧ್ಯಕ್ಷ ನಿಂಗಮ್ಮ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments