ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ತಹಸೀಲ್ದಾರ್ ವರ್ಗಕ್ಕೆ ವಿರೋಧ

Parashurama
Updated On : 3 Feb 2013, 11:46 am

ಕಿಕ್ಕೇರಿ: ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮರಳು ಮಾಫಿಯಾ, ಗಣಿಗಾರಿಕೆಗೆ ಕಡಿವಾಣ ಹಾಕಿ, ಅತ್ಯಲ್ಪ ಅವಧಿಯಲ್ಲಿ ತಾಲೂಕು ಆಡಳಿತ ಚುರುಕುಗೊಳಿಸಿದ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರ ವರ್ಗಾವಣೆಯನ್ನು ದಿಢೀರನೆ ಮಾಡಿರುವುದು ಸರಿಯಲ್ಲ, ವರ್ಗಾವಣೆ ರದ್ದುಪಡಿಸದಿದ್ದರೆ ತೀವ್ರ ಹೋರಾಟ ಅನಿವಾರ್ಯ ಎಂದು ಹೋಬಳಿಯ ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸಿದರು.
ಕರವೇ ತಾಲೂಕು ಅಧ್ಯಕ್ಷ ಎ.ಸಿ.ಕಾಂತರಾಜು ಮಾತನಾಡಿ, ಅಧಿಕಾರಿಗಳು ಬಡ್ತಿ ಹೊಂದುವವರಿಗೆ ತಾಲೂಕಿನಲ್ಲಿಯೇ ಇರಲಿ. ಪಹಣಿ ತಿದ್ದುಪಡಿ ಆಂದೋಲನ, ಸಮಾಜಮುಖಿ ಕಾರ್ಯಕ್ರಮಗಳಾದ ಗ್ರಾಮ ವಾಸ್ತವ್ಯ, ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರ, ಸಕಾಲ ಯೋಜನೆಯ ಸಮಗ್ರ ಅನುಷ್ಠಾನ, ಆರೋಗ್ಯ ತಪಾಸಣೆ ಶಿಬಿರದಂತಹ ಕಾರ್ಯಕ್ರಮಗಳಿಂದ ಜನತೆಯಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಕಂದಾಯ ಇಲಾಖೆಯ ಕಾರ್ಯದೊಂದಿಗೆ ರೈತರ ಬದುಕಿಗೆ ಹೊಸ ಆಯಾಮ ನೀಡುವ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಈ ಎಲ್ಲ ಯೋಜನೆಗಳನ್ನು ತಹಸೀಲ್ದಾರ್ ತಾಲೂಕಿನ ಜನತೆಗೆ ತಲುಪಿಸುವವರಿಗೆ ಬೇರೆಡೆಗೆ ವರ್ಗಾವಣೆಯಾಗುವುದು ಬೇಡ. ವರ್ಗಾವಣೆಯಾದರೆ ಅಧಿಕಾರಿಗಳಿಗೇನೂ ನಷ್ಟವಾಗದಿದ್ದರೂ, ಕಿಡಿಗೇಡಿಗಳಿಗೆ ಇಷ್ಟವಾದರೂ ತಾಲೂಕಿನ ಜನತೆಗಂತೂ ಬಹಳ ನಷ್ಟವಾಗಲಿದೆ ಎಂದರು.
ಹೋಬಳಿ ಘಟಕ ಅಧ್ಯಕ್ಷ ಗುರುಮೂರ್ತಿ ಮಾತನಾಡಿದರು. ಪಟ್ಟಣದ ಪ್ರಮುಖ ಬೀದಿಯಿಂದ ಘೋಷಣೆ ಕೂಗುತ್ತ ಸಾಗಿದ ಪ್ರತಿಭಟನಾಕಾರರು ಅಂತಿಮವಾಗಿ ನಾಡಕಚೇರಿಗೆ ತೆರಳಿ ಉಪತಹಸೀಲ್ದಾರ್ ಶಿವನಂಜೇಗೌಡರಿಗೆ ಮನವಿ ಸಲ್ಲಿಸಿದರು.
ಹೋಬಳಿ ಅಧ್ಯಕ್ಷ ಗುರುಮೂರ್ತಿ, ಸಾಸಲು ಮಹದೇವಪ್ಪ, ತಮ್ಮಣ್ಣಗೌಡ, ಗ್ರಾಪಂ ಸದಸ್ಯ ಎಸ್.ಆರ್. ಕೇಶವಮೂರ್ತಿ, ಕೆ.ಟಿ. ಪರಮೇಶ್, ಹರಿಣಿಗೋವಿಂದ್, ಸ್ಟುಡಿಯೋ ಗೋಪಾಲ್, ನಾಗೇಂದ್ರ, ನಾಗೇಶ್, ನಿವೃತ್ತ ಶಿಕ್ಷಕ ರಾಮಕೃಷ್ಣೇಗೌಡ, ಕುಮಾರ್, ನಾಗೇಶ್, ಮಂಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments