ಮಕ್ಕಳಲ್ಲಿ ಶಿಸ್ತು, ಶ್ರದ್ಧೆ ಬೆಳೆಸಿ: ಪುಟ್ಟರಾಜು
ಮೇಲುಕೋಟೆ: ಶಿಸ್ತಿಗೆ ಮತ್ತೊಂದು ಹೆಸರಾದ ಸೇವಾದಳದ ಮೂಲಕ ಮಕ್ಕಳಿಗೆ ಶಿಸ್ತು, ಶ್ರದ್ಧೆ ಹಾಗೂ ದೇಶಾಭಿಮಾನ ಬೆಳೆಸಬೇಕಾದ ಅಗತ್ಯವಿದೆ ಎಂದು ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಮೇಲುಕೋಟೆಯಲ್ಲಿ ಭಾನುವಾರ ಜಿಲ್ಲಾ ಭಾರತ ಸೇವಾದಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಶಾಲಾ ಶಿಕ್ಷಕರಿಗೆ 7 ದಿನಗಳ ಕಾಲ ಹಮ್ಮಿಕ್ಕೊಂಡಿದ್ದ ಜಿಲ್ಲಾಮಟ್ಟದ ಸಹಾಯಕ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಕ್ಷೇತ್ರ ನೈತಿಕತೆಯ ತಿಳಿವಳಿಕೆಯಿಲ್ಲದ ನಾಯಕರಿಂದಾಗಿ ಅಧೋಗತಿಗಿಳಿದಿದೆ. ಇಂತಹ ರಾಜಕೀಯ ಮುಖಂಡರು ಇಡೀ ರಾಜಕೀಯ ಕ್ಷೇತ್ರವನ್ನೇ ಕಲುಷಿತಗೊಳಿಸುತ್ತಿದ್ದಾರೆ. ಸಮಾಜದ ವಿವಿಧ ಸ್ತರಗಳಲ್ಲಿ ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ ಮರೆಯಾಗುತ್ತಿದ್ದು, ಇಂತಹ ನಡವಳಿಕೆ ಸರಿಪಡಿಸಬೇಕಾಗಿದೆ ಎಂದರು.
ಮೇಲುಕೋಟೆ ಠಾಣೆಯ ಎಸ್ಐ ಅಶೋಕ್ ಮಾತನಾಡಿ, ಪ್ರತಿ ಶಾಲೆಯ ಭಾರತ ಸೇವಾದಳದ ಶಿಕ್ಷಕರು ಸಮವಸ್ತ್ರವಿಲ್ಲದ ಪೊಲೀಸರಿದ್ದಂತೆ ಎಂದು ಭಾವಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಬೇಕು. ಸಮೀಪದ ಪೊಲೀಸ್ ಠಾಣೆಯ ಸಂಪರ್ಕ ಹೊಂದುವ ಮೂಲಕ ಅಪರಾಧ ನಿಯಂತ್ರಿಸಲು ಪೊಲೀಸರೊಂದಿಗೆ ಸಹಕಾರ ನೀಡಿ ಎಂದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಬಸವರಾಜು, ಪಾಂಡವಪುರ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ಖಜಾಂಚಿ ವಿಜಯ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಂಜು, ಮದ್ದೂರು ಘಟಕದ ಅಧ್ಯಕ್ಷ ಸತೀಶ್, ಕೊಣನೂರು ಕಾಲೇಜಿನ ಪ್ರಾಂಶುಪಾಲ ಕುಮಾರ್, ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್, ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಗಂಗಾಧರಯ್ಯ, ಗಣೇಶ್, ಉಷಾ, ಲೋಕೇಶ್, ಭರತ್, ಪ್ರೇಮ ಮತ್ತಿತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.