ಮಧುಮೇಹ ತಪಾಸಣಾ ಶಿಬಿರ
ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಸಂಘದ ಆವರಣದಲ್ಲಿ ನೌಕರರ ಸಂಘ ಮತ್ತು ಹಿಮಾಲಯ ಡ್ರಗ್ಸ್ ಕಂಪನಿ ವತಿಯಿಂದ ಮಧು ಮೇಹ ತಪಾಸಣಾ ಶಿಬಿರ ನಡೆಯಿತು.
ಸಂಘದ ಅಧ್ಯಕ್ಷ ಪುಟ್ಟೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಂಪನಿಯ ಡಾ. ಕೃಷ್ಣಪ್ಪಗೌಡ ಮಧುಮೇಹಿಗಳಿಗೆ ದೇಹದಲ್ಲಿರುವ ಸಕ್ಕರೆ ಅಂಶ ಮತ್ತು ರಕ್ತದೊತ್ತಡಗಳ ಕಡಿಮೆ ಹಾಗೂ ಹೆಚ್ಚಾಗಿರುವುದನ್ನು ನಮ್ಮ ಶರೀರದಲ್ಲಿ ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ ಕಂಪೂಟರ್ ಶಿಕ್ಷಣದಲ್ಲಿ ತೋರಿಸಿ ಮಾಹಿತಿ ನೀಡಿದರು.
ನಂತರ ನಿವೃತ್ತ ನೌಕರರ ಕುಟುಂಬಗಳ 100ಕ್ಕೂ ಹೆಚ್ಚು ಮಂದಿಗೆ ಮಧುಮೇಹ ಕಾಯಿಲೆ ಮತ್ತು ರಕ್ತದೊತ್ತಡ ತಪಾಸಣಾ ಪರೀಕ್ಷೆ ಮಾಡಿಸಿ ಉಚಿತವಾಗಿ ಚಿಕಿತ್ಸೆ ನೀಡಿದರು. ಕಾರ್ಯದರ್ಶಿ ಎಸ್. ಆರ್. ರಾಮಚಂದ್ರರಾವ್, ಚಿಕ್ಕಣ್ಣ ಹಾಗು ಹರೀಶ್ ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.