ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಹವ್ಯಾಸಿ ಮೀನುಗಾರಿಕೆ: ಅಗತ್ಯ ಕ್ರಮಕ್ಕೆ ಸೂಚನೆ

Parashurama
Updated On : 3 Feb 2013, 11:27 am

ಶ್ರೀರಂಗಪಟ್ಟಣ: ಪಟ್ಟಣದ ಪ್ರವಾಸಿ ತಾಣಗಳಾದ ಸಂಗಮ್, ಗೋಸಾಯಿಘಾಟ್ ಹಾಗೂ ನಿಮಿಷಾಂಬ ದೇವಾಲಯಗಳ ಬಳಿ ಕಾವೇರಿ ನದಿಯಲ್ಲಿ ಹರಿಗೋಲು (ಉತ್ಸಾಹಿ ಹವ್ಯಾಸಿ ಮೀನುಗಾರಿಕೆ) ನಡೆಸಲು ಪರವಾನಗಿ ಪಡೆದಿರುವ ಗುತ್ತಿಗೆದಾರರು ಪ್ರವಾಸಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಅರುಳ್‌ಕುಮಾರ್ ಸೂಚಿಸಿದರು.
ಕಳೆದ ಕೆಲವು ದಿನಗಳ ಹಿಂದೆ ನಿಮಿಷಾಂಬ ಬಳಿ ಹರಿಗೋಲಿನಿಂದ ಪ್ರವಾಸಿಗರಿಗೆ ಉತ್ಸಾಹಿ ಹವ್ಯಾಸಿ ಮೀನುಗಾರಿಕೆ ಮಾಡುವಾಗ ರಕ್ಷಣೆಗೆ ಲೈಪ್ ಜಾಕೆಟ್ ಧರಿಸಿಲ್ಲದೆ ಹರಿಗೋಲು ನಡೆಸುತ್ತಿದ್ದುದ್ದರಿಂದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ತಡೆಹಿಡಿದಿದ್ದರು.
ಹರಿಗೋಲು ನಡೆಸುವವರು ಪ್ರವಾಸೋದ್ಯಮ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ದೋಣಿಯಲ್ಲಿ ಕುಳಿತು ಮೀನುಗಾರಿಕೆ ಮಾಡುವ ಪ್ರವಾಸಿಗರ ರಕ್ಷಣೆಗೆ ಲೈಫ್ ಜಾಕೆಟ್, ಹಗ್ಗ ಹಾಗೂ ಗಾಳಿ ತುಂಬಿದ ಟ್ಯೂಬ್ ಇತ್ಯಾದಿ ರಕ್ಷಣೆ ಮಾಡುವ ವಸ್ತುಗಳನ್ನು ಹರಿಗೋಲಿನಲ್ಲಿ ಇಟ್ಟಿರಬೇಕು. ದೋಣಿ ನಡೆಸುವವರು ಕಡ್ಡಾಯವಾಗಿ ಇನ್ಸ್ಯೂರೆನ್ಸ್ ಹೊಂದಿರಬೇಕು ಎಂದು ತಿಳಿಸಿದರು.
ಪಟ್ಟಣದ ನಾನಾ ಪ್ರಮುಖ ಪ್ರವಾಸಿ ತಾಣಗಳ ಬಳಿ ಕಾವೇರಿ ನದಿಯಲ್ಲಿ ಹರಿಗೋಲು ನಡೆಸಲು ಮೀನುಗಾರಿಕೆ ಇಲಾಖೆಯಿಂದ ಉತ್ಸಾಹಿ ಪ್ರವಾಸಿಗರಿಗೆ ಹವ್ಯಾಸಿ ಮೀನುಗಾರಿಕೆ ಮಾಡಲು ಅನುಮತಿ ನೀಡಿದೆ ಎಂದರು.
ಪ್ರವಾಸೋದ್ಯಮ ಇಲಾಖೆ ಇದಕ್ಕೆ ಇನ್ನೂ ಅನುಮತಿ ನೀಡಿಲ್ಲ. ಉತ್ಸಾಹಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದ ಪ್ರವಾಸಿ ತಾಣಗಳಲ್ಲೂ ಅವಕಾಶ ಮಾಡಿಕೊಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಆಯುಕ್ತ ಶ್ರೀರಾಮಯ್ಯ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments