ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

3ರಲ್ಲಿ 2.50 ರೈತರಿಗೆ: ಹರೀಶ್

Parashurama
Updated On : 17 Feb 2013, 12:30 pm

ಮದ್ದೂರು: ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಸ್ಯಾಚೆಟ್ ಹಾಲಿನ ಬೆಲೆಯಲ್ಲಿ ಹೆಚ್ಚಳವಾಗಿರುವ 3 ರಲ್ಲಿ ಉತ್ಪಾದನಾ ವೆಚ್ಚವಾಗಿ 50 ಪೈಸೆ ಇಟ್ಟುಕೊಂಡು ಪ್ರತಿ ಲೀಟರ್ ಹಾಲಿಗೆ 2.50ರಂತೆ ರೈತರಿಗೆ ನೀಡಲು ತೀರ್ಮಾನಿಸಿದೆ.
ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳ ಸ್ಯಾಚೆಟ್ ಹಾಲಿನ ಬೆಲೆ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಶನಿವಾರ (ಫೆ.16)ದಿಂದಲೇ ಪರಿಷ್ಕೃತ ದರ ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ ಎಂದು ಒಕ್ಕೂಟದ ಅಧ್ಯಕ್ಷ ಎಂ.ಬಿ.ಹರೀಶ್ ಕನ್ನಡಪ್ರಭಕ್ಕೆ ತಿಳಿಸಿದರು.
ಈಗ ಒಕ್ಕೂಟವು ಆರ್ಥಿಕ ಸಂಕಷ್ಟದಿಂದ ಹಂತ ಹಂತವಾಗಿ ಹೊರ ಬರುತ್ತಿದೆ. ಹಾಲು ಉತ್ಪಾದಕರಿಗೆ ಮೂರು ವಾರಗಳ ಬಟವಾಡೆ ಬಾಕಿಯಿದೆ. ಈ ಬಾರಿ ಸಂಘಗಳಿಂದ ಹಾಲು ಶೇಖರಣೆಯಾದ ನಂತರ ಒಕ್ಕೂಟಕ್ಕೆ ಬಂದು ಬಿಲ್ಲು ಉತ್ತೀರ್ಣಗೊಳಿಸುವ ಅವಧಿಯ ಹಂತವಾಗಿದೆ ಎಂದು ಹೇಳಿದರು.
ಒಕ್ಕೂಟದಲ್ಲಿ 500 ಮೆಟ್ರಿಕ್ ಟನ್ ಬೆಣ್ಣೆ ಮತ್ತು 2800 ಮೆಟ್ರಿಕ್ ಟನ್ ಹಾಲಿನ ಪುಡಿ ದಾಸ್ತಾನಿದ್ದು, ಇವುಗಳ ಒಟ್ಟಾರೆ ಅಂದಾಜು ಮೌಲ್ಯ 46 ಕೋಟಿ. ಈ ಉತ್ಪನ್ನಗಳಿಗೆ ಮುಂದೆ ಒಳ್ಳೆಯ ಬೆಲೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ ಎಂದರು.
ಒಕ್ಕೂಟದ ಆಡಳಿತ ಮಂಡಳಿಯು ಜಿಲ್ಲೆಯ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡುವ ಬಗ್ಗೆ ಚರ್ಚಿಸಿದ್ದು, ಮಾ.15ರ ನಂತರ ಮತ್ತೊಮ್ಮೆ ದರ ಪರಿಷ್ಕರಿಸಿ ನೀಡುವ ಚಿಂತನೆಯಲ್ಲಿದೆ. ಜತೆಗೆ ಹೈನುಗಾರಿಕೆ ಅಭಿವೃದ್ಧಿ ಪಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹರೀಶ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement