ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಹಲಗೂರು ರಸ್ತೆ ಕಾಮಗಾರಿಗೆ ಚಾಲನೆ

Parashurama
Updated On : 17 Feb 2013, 12:30 pm

ಭಾರತೀನಗರ: ಭಾರತೀನಗರ ಸಮೀಪದ ತೊರೆಬೊಮ್ಮನಹಳ್ಳಿ ಗ್ರಾಮದಲ್ಲಿ ಬೊಪ್ಪಸಮುದ್ರ ಗೇಟ್‌ನಿಂದ ಚಂದೂಪುರದವರೆಗೆ ಓಆರ್‌ಎಫ್ ಯೋಜನೆಯಡಿ 4 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಕಲ್ಪನಾ ಸಿದ್ದರಾಜು ಹಾಗೂ ಬಿ.ರಾಮಕೃಷ್ಣ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕಿ ಕಲ್ಪನಾ ಸಿದ್ದರಾಜು, ಹಲಗೂರು ರಸ್ತೆ ಮಾರ್ಗವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಕೆಲವೇ ದಿನಗಳಲ್ಲಿ ಕುದುರೆ ಮಾರ್ಗವಾಗಿ ಪರಿವರ್ತನೆ ಮಾಡಲಾಗುವುದು ಎಂದರು. ಈಗಾಗಲೇ ಭಾರತೀನಗರದಿಂದ ಅಣ್ಣೂರುಗೇಟ್ ವರೆಗೆ ಕಾಂಕ್ರಿಟ್ ರಸ್ತೆಗೆ ರು. 1.70 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಈ ರಸ್ತೆ ಕಾಮಗಾರಿಗೆ ತಮ್ಮ  ಅಧಿಕಾರವಧಿಯಲ್ಲಿ ಅಭಿವೃದ್ಧಿಗೊಳಿಸುತ್ತಿರುವುದು ಸಂತಸ ತಂದಿದೆ ಎಂದರು.
ವಿಧಾನಪರಿಷತ್ ಸದಸ್ಯ ರಾಮಕೃಷ್ಣ ಮಾತನಾಡಿ, ಉತ್ತಮ ರಸ್ತೆ ನಿರ್ಮಾಣಕ್ಕಾಗಿ ಎಲ್ಲರೂ ಸಹಕರಿಸಬೇಕಿದೆ. ಕಾಮಗಾರಿ ಆರಂಭಗೊಂಡು ಮುಗಿಯುವವರೆಗೂ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ತೊಂದರೆಯಾಗಬಹುದು. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಾರ್ಯಧ್ಯಕ್ಷ ಹೊನ್ನಲಗೆರೆ ವೆಂಕಟೇಶ್, ಎ.ಪಿ.ಎಂ.ಸಿ. ನಿರ್ದೇಶಕ ಎಂ.ಎಸ್.ರುದ್ರಮುನಿಸ್ವಾಮಿ, ತಾ.ಪಂ ಸದಸ್ಯರಾದ ಮಮತಾ ವೆಂಕಟೇಶ್, ಗ್ರಾಪಂ ಅಧ್ಯಕ್ಷರಾದ ಗೌರಮ್ಮ, ಚಂದೂಪುರ ಸುರೇಶ್,  ಉಪಾಧ್ಯಕ್ಷರಾದ ಶಂಕರೇಗೌಡ, ಮೆಣಸಗೆರೆ ರಾಜಣ್ಣ, ಮಧು, ಮಣಿಗೆರೆ ಪ್ರಕಾಶ್, ಚಿಕ್ಕತಿಮ್ಮೇಗೌಡ, ಬೊಪ್ಪಸಮುದ್ರ ಶ್ರೀಕಂಠೇಗೌಡ, ಕ್ಯಾತಘಟ್ಟದ ಗಿರೀಶ್, ರಾಮಕೃಷ್ಣ, ಬೊಪ್ಪಸಮುದ್ರದ ಬಸವರಾಜಪ್ಪ, ಸಬ್ಬನಹಳ್ಳಿ ಶಂಕರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement