ಪುಸ್ತಕಕ್ಕಿಂತ ಆತ್ಮಸಂಗಾತಿ ಬೇರಿಲ್ಲ: ನಂಜುಂಡಸ್ವಾಮಿ
ಭಾರತೀನಗರ: ವಿದ್ಯಾರ್ಥಿಗಳು ಉತ್ತಮ ಗ್ರಂಥಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನವೃದ್ಧಿಗೊಳ್ಳುವುದರ ಜೊತೆಗೆ ಉತ್ತಮ ಭವಿಷ್ಯ ರೂಪಿಸುತ್ತಿದೆ ಎಂದು ಪುಸ್ತಕದ ಮನೆ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಡಿ.ಸಿ. ತಮ್ಮಣ್ಣ ಕಾಲೇಜು) ಕನ್ನಡ ವಿಭಾಗದ ವತಿಯಿಂದ 'ಪುಸ್ತಕ ಪ್ರೀತಿ' ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಕ್ಕಿಂತ ಆತ್ಮಸಂಗಾತಿ ಬೇರೊಂದಿಲ್ಲ. ನಿಮ್ಮ ಆದಾಯದಲ್ಲಿ ಒಂದು ಪಾಲನ್ನು ಪುಸ್ತಕ ಕೊಳ್ಳುವಿಕೆಗೆ ಬಳಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಅಮೂಲ್ಯ ಗ್ರಂಥಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.