ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಕೆಆರ್‌ಎಸ್ ಡ್ಯಾಂಗೆ ಬಿಗಿ ಭದ್ರತೆ

Parashurama
Updated On : 22 Feb 2013, 11:12 am

ಮಂಡ್ಯ:  ಜಿಲ್ಲೆಯ ಕೃಷ್ಣ ರಾಜಸಾಗರ ಜಲಾಶಯಕ್ಕೆ ಗುರುವಾರ ರಾತ್ರಿಯಿಂದಲೇ ಬಿಗಿ ಭದ್ರತೆ ಒದಗಿಸಲಾಗಿದೆ. ಹೈದರಾಬಾದ್‌ನಲ್ಲಿ ಅವಳಿ ಬಾಂಬ್ ಸ್ಫೋಟಗೊಂಡ ನಂತರ ಅಣೆಕಟ್ಟೆಯ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಎಎಸ್ಪಿ ರಾಜಣ್ಣ ತಿಳಿಸಿದ್ದಾರೆ. ಅಣೆಕಟ್ಟೆ ಭದ್ರತೆಗಾಗಿ ಇಬ್ಬರು ಇನ್‌ಸ್ಪೆಕ್ಟರ್, ಮೂವರು ಸಬ್‌ಇನ್‌ಸ್ಪೆಕ್ಟರ್, 30 ಮಂದಿ ಪೊಲೀಸರು ಹಾಗೂ 2 ತುಕಡಿ ಕೆಎಸ್‌ಆರ್‌ಪಿ ಹಾಗೂ 2 ತುಕಡಿ ಡಿಎಆರ್ ಪೊಲೀಸರನ್ನು ಬಂದೋಬಸ್ತಿಗೆ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು. ಅಣೆಕಟ್ಟೆಯ ಮೇಲ್ಭಾಗದಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿದೆ. ಬೃಂದಾವನಕ್ಕೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಎಂದಿಗಿಂತ ಈಗ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ನಿಷೇಧಾಜ್ಞೆ ರದ್ದು:  ಈ ನಡುವೆ ಕಾವೇರಿ ನದಿಗೆ ಬಿಡಲಾಗುತ್ತಿದ್ದ ಅಣೆಕಟ್ಟೆ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದಾಗಿ ಕಳೆದ 1 ವಾರದಿಂದ ಕೆ.ಆರ್.ಎಸ್. ಸುತ್ತಮುತ್ತ ಹಾಕಲಾಗಿದ್ದ 144 ಕಲಂ ನಿಷೇಧಾಜ್ಞೆಯನ್ನು  ಸಂಪೂರ್ಣ ತೆರವುಗೊಳಿಸಲಾಗಿದೆ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement