ಇಂದಿನಿಂದ ಮಕ್ಕಳ ಚಲನಚಿತ್ರೋತ್ಸವ
ಮಂಡ್ಯ: ಮಕ್ಕಳ ಚಲನಚಿತ್ರೋತ್ಸವವನ್ನು ಫೆ. 25ರಿಂದ ಮಾರ್ಚ್ 4 ರವರೆಗೆ ನಡೆಯಲಿದೆ. ಫೆ. 25 ರಿಂದ 27 ರವರೆಗೆ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಮಂಡ್ಯ ನಗರದ ಗುರುಶ್ರೀ ಚಿತ್ರಮಂದಿರದಲ್ಲಿ ಕೇರಾಫ್ ಫುಟ್ಪಾತ್, ಸಂಜಯ ಚಿತ್ರಮಂದಿರದಲ್ಲಿ ಚಿಲಿಪಿಲಿ ಹಕ್ಕಿಗಳು, ಗಿರಿಜಾ ಚಿತ್ರಮಂದಿರದಲ್ಲಿ ತಾರೇ ಜಮೀನ್ ಪರ್, ನಂದಾ ಚಿತ್ರಮಂದಿರದಲ್ಲಿ ಬೇಬೀಸ್ ಡೇ ಔಟ್ ಹಾಗೂ ಮಹಾವೀರ ಚಿತ್ರಮಂದಿರದಲ್ಲಿ ಚಂದನ ಚಿಗುರು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಫೆ.25, 26 ಹಾಗೂ 27 ರಂದು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಮದ್ದೂರಿನ ಸಂಜಯ ಚಿತ್ರಮಂದಿರದಲ್ಲಿ ಕು-ಕು ಮತ್ತು ಮಹಾವೀರ ಚಿತ್ರಮಂದಿರದಲ್ಲಿ ಸೂಪರ್ನ್ನೋವಾ-459, ಭಾರತೀನಗರದ ಸುಮ ಚಿತ್ರಮಂದಿರದಲ್ಲಿ ಸ್ಕೂಲ್ ಮಾಸ್ಟರ್ ಹಾಗೂ ಮಾರುತಿ ಚಿತ್ರಮಂದಿರದಲ್ಲಿ ಚಿನ್ನಾರಿ ಮುತ್ತಾ. ಪಾಂಡವಪುರದ ಲಾಲ್ಬಹುದ್ದೂರ್ ಚಿತ್ರಮಂದಿರದಲ್ಲಿ ಕೊಟ್ರೇಶಿ ಕನಸು ಮತ್ತು ಕೋಕಿಲ ಚಿತ್ರ ಮಂದಿರದಲ್ಲಿ ಮ್ಯಾಜಿಕ್ ಅಜ್ಜಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಫೆ. 28, ಮಾ.1 ಹಾಗೂ 4 ರಂದು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಮಳವಳ್ಳಿಯ ಮಹಾಲಕ್ಷ್ಮಿ ಚಿತ್ರಮಂದಿರದಲ್ಲಿ ಚಂದನ ಚಿಗುರು ಹಾಗೂ ರಾಜರಾಜೇಶ್ವರಿ ಚಿತ್ರಮಂದಿರದಲ್ಲಿ ಬೇಬೀಸ್ ಡೇ ಔಟ್, ಹಲಗೂರಿನ ರವಿ ಚಿತ್ರಮಂದಿರದಲ್ಲಿ ಕೇರಾಫ್ ಫುಟ್ಪಾತ್, ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸ್ಕೂಲ್ ಮಾಸ್ಟರ್, ಶ್ರೀರಂಗಪಟ್ಟಣದ ಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಕೊಟ್ರೇಶಿ ಕನಸು ಹಾಗೂ ಗಂಜಾಂನ ಶ್ರೀದೇವಿ ಚಿತ್ರಮಂದಿರದಲ್ಲಿ ತಾರೇ ಜಮೀನ್ ಪರ್ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಫೆ. 28, ಮಾ.1 ಹಾಗೂ 4 ರಂದು ಬೆಳಗ್ಗೆ 8 ರಿಂದ 10 ಗಂಟೆಯವರಗೆ ಬಾಬುರಾಯನ ಕೊಪ್ಪಲಿನ ಭಾರತಿ ಚಿತ್ರಮಂದಿರದಲ್ಲಿ ಕು-ಕು, ಕೆ.ಆರ್.ಪೇಟೆಯ ಬಸವೇಶ್ವರ ಚಿತ್ರಮಂದಿರದಲ್ಲಿ ಚಿಲಿಪಿಲಿ ಹಾಗೂ ಶ್ರೀರಂಗಾ ಚಿತ್ರಮಂದಿರದಲ್ಲಿ ಚಿನ್ನಾರಿ ಮುತ್ತಾ ಹಾಗೂ ಸಾತನೂರಿನ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಮ್ಯಾಜಿಕ್ ಅಜ್ಜಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಉದ್ಯೋಗ ಮೇಳ
ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಫೆ. 26ರಂದು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ತೇಜಸ್ವಿನಿ ಎಂಟರ್ಪ್ರೈಸಸ್ ಮೈಸೂರು ವತಿಯಿಂದ ಐಟಿಐ ಯಾವುದೇ ಟ್ರೇಡ್ ಮತ್ತು ಡಿಪ್ಲೊಮಾ ಇನ್ ಇ. ಅಂಡ್ಸಿ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಟ್ರೈನೀಸ್ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ನವಭಾರತ್ ಫರ್ಟಿಲೈಸರ್ಸ್, ಮಂಡ್ಯ ಇವರು ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಐಟಿಐ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಹೆಚ್ಚಿನ ವಿವರಗಳಿಗೆ ದೂ. 08232-220126, ಮೊ. 9900351939 ಸಂಪರ್ಕಿಸಬಹುದು.