ಎನ್ಎಸ್ಎಸ್ ಶಿಬಿರ ಯಶಸ್ವಿ
ಭಾರತೀನಗರ: ಸಮೀಪದ ಭುಜುವಳ್ಳಿಯಲ್ಲಿ ಭಾರತೀನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕುರಿತು ಕೆಎಎಸ್ ಅಧಿಕಾರಿ ಯೋಗಾನಂದ್ ಅವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ನಂತರ ಸಹಕಾರ ಚಳವಳಿ ಮತ್ತು ಯುವ ಜನತೆ ಕುರಿತು ಸಹಕಾರ ಸಂಘಗಳ ಉಪ ನಿಬಂಧಕ ರಾಮಕೃಷ್ಣೇಗೌಡ ತಿಳಿವಳಿಕೆ ನೀಡಿದರು.
ಎಸ್.ಡಿ. ಜಯರಾಮು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಂಡ್ಯ ಇವರ ಸಹಯೋಗದಲ್ಲಿ ಸಕ್ಕರೆ ಕಾಯಿಲೆ ಉಚಿತ ತಪಾಸಣೆ ನಡೆಸಿದ್ದು, ಗ್ರಾಮಸ್ಥರು ಸದುಪಯೋಗಪಡಿಸಿಕೊಂಡರು.