ಪೋಲಿಯೋ ಲಸಿಕೆ: ಶೇ. 89 ಸಾಧನೆ
ಮಂಡ್ಯ: ಜಿಲ್ಲೆಯಲ್ಲಿ ಭಾನುವಾರ ನಡೆದ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಶೇ. 89.34 ರಷ್ಟು ಸಾಧನೆಯಾಗಿದೆ ಎಂದು ಡಿಎಚ್ಒ ಡಾ.ಮರೀಗೌಡ ತಿಳಿಸಿದರು. ಫೆ. 24 ರಿಂದ 27 ರವರೆಗೆ ನಡೆಯಲಿರುವ ಪೋಲಿಯೋ ಲಸಿಕಾ ಕಾರ್ಯಕ್ರಮ ನಗರದಲ್ಲಿ ಮೂರು ದಿನ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಲಿರುವ ಕಾರ್ಯಕರ್ತರು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಲಿದ್ದಾರೆಂದು ಹೇಳಿದರು.
ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಾಧನೆಯ ವಿವರ ಇಂತಿದೆ. ಶ್ರೀರಂಗಪಟ್ಟಣ ಶೇ.88.87, ಕೆ.ಆರ್. ಪೇಟೆ ಶೇ.90, ಪಾಂಡವಪುರ ಶೇ.93, ಮದ್ದೂರು ಶೇ.90.16, ಮಂಡ್ಯ ಶೇ.82, ಮಳವಳ್ಳಿ ಶೇ. 99.47 ನಾಗಮಂಗಲ ಶೇ. 90.15 ರಷ್ಟು ಸಾಧನೆಯಾಗಿದೆ.