ಪೋಲಿಯೋ ಲಸಿಕೆಗೆ ಡಿಸಿ ಚಾಲನೆ
ಮಂಡ್ಯ: ಜಿಲ್ಲಾದ್ಯಂತ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಭಾನುವಾರ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ನಗರದ ಕಾಳಿಕಾಂಬ ದೇವಸ್ಥಾನದ ಸಮೀಪದ ಪಶುಸಂಗೋಪನಾ ಆಸ್ಪತ್ರೆಯ ಆವರಣದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
2ನೇ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 1,87,702 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದಕ್ಕಾಗಿ 723 ಕೇಂದ್ರ ತೆರೆದಿದೆ. ಪ್ರತಿ ಕೇಂದ್ರಕ್ಕೆ 4 ಜನರಂತೆ 2,892 ಸಿಬ್ಬಂದಿ ಹಾಗೂ 5 ಬೂತ್ಗೆ ಒಬ್ಬರು ವೈದ್ಯರನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಪ್ಪ, ರೆಡ್ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಎಸ್.ಎನ್. ಬಾಬು, ಫ್ರೋಬೆಷನರಿ ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಕೆಎಎಸ್ ಅಧಿಕಾರಿ ಶಿವಾನಂದ ಕರಾಳೆ, ತಹಸೀಲ್ದಾರ್ ಡಾ. ಬಿ.ಕೆ. ಮಮತಾ, ಡಿಎಚ್ಒ ಡಾ.ಮರೀಗೌಡ, ಆರ್ಸಿಎಚ್ ಅಧಿಕಾರಿ ಡಾ.ಲೋಚನಾ ಹಾಗೂ ಡಾ.ಸೋಮಶೇಖರ್ ಇದ್ದರು.