ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಶಿಕ್ಷಣಕ್ಕೆ ಪೋಷಕರ ಪಾತ್ರ ಮುಖ್ಯ

Parashurama
Updated On : 24 Feb 2013, 10:09 am

ನಾಗಮಂಗಲ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮುಂದುವರಿಯಲು ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಮಹತ್ವದಾಗಿದೆ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಸಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲೂಕಿನ ದೇವಲಾಪುರ ಹೋಬಳಿ ಕರಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಜ್ಞಾನಜ್ಯೋತಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯೆ ಕಲಿತ ಶಾಲೆ ಮತ್ತು ಕಲಿಸಿದ ಶಿಕ್ಷಕರನ್ನೆ ಮರೆಯುವ ಕಾಲದಲ್ಲಿಯೂ ತಾವು ಕಲಿತ ಶಾಲೆಯ ಬಗ್ಗೆ ಇರುವ ಅಭಿಮಾನದಿಂದ  ಶಿಕ್ಷಣ ನೀಡಿದ ಗುರುಗಳ ಬಗ್ಗೆ ಗೌರವವಿಟ್ಟು ಗುರುವಂದನಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.  
ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಮತ್ತು ಪೋಷಕರ ಪಾತ್ರ ಮುಖ್ಯವಾಗಿದೆ. ಗ್ರಾಮಕ್ಕೆ ಪ್ರೌಢಶಾಲೆ ಮುಂಜೂರಾದ ವರ್ಷದಲ್ಲಿ ಕಟ್ಟಡದ ಕೊರತೆ ನಿವಾರಿಸಲು ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಶಾಲಾ ಕೊಠಡಿ ನಿರ್ಮಿಸಿಕೊಡುವುದರ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಂತಹ ಗ್ರಾಮಸ್ಥರ ಸೇವೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಚಿರಋಣಿಯಾಗಿರಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡು ಪ್ರಸ್ತುತ ವರ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಶ್ರೀನಿವಾಸಚಾರ್, ಆರ್. ಭಾಗ್ಯಲಕ್ಷ್ಮಿ, ಫಹಿದಾಬೇಗಂ, ಬಿ. ಜ್ಯೋತಿ, ಎನ್.ಆರ್. ಜಯರಾಮಪ್ಪ, ವಿ. ಕೃಷ್ಣಕುಮಾರಿ, ಜಬೀನ್‌ತಾಜ್, ಪಾಂಡಪ್ಪ ಎಚ್.ಬಿ. ಅಫ್ಷಾನ್ ಫಿರ್ರೋಸ್, ಇಸ್ರತ್ ಉನ್ನೀಸಾ, ಎಂ.ಎಸ್. ಸುನೀತ, ಬಿ.ಎನ್. ರವಿಕುಮಾರ್, ಮಾಲತೇಶ್, ಪುಟ್ಟಸ್ವಾಮಿ, ಇಂದ್ರಕುಮಾರ್, ಮಹಾಲಕ್ಷ್ಮಿ, ಭವ್ಯ, ರುದ್ರು, ಅಮೀರ್ ಹುಸೇನ್ ಅವರಿಗೆ ಹಳೇ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.
ನಿವೃತ್ತ ಮುಖ್ಯ ಶಿಕ್ಷಕರುಗಳಾದ ನಸ್ರೀನ್‌ತಾಜ್, ಡಿ.ಬಿ. ಜಗದೀಶ್‌ಮೂರ್ತಿ, ಉಪನ್ಯಾಸಕ ನಯಾಜ್ ಪಾಷ, ರಾಮಚಂದ್ರಪ್ಪ, ಪತ್ರಕರ್ತ ಕೆ.ಸೀತಾರಾಮು ಮಾತನಾಡಿದರು. ಮುಖ್ಯ ಶಿಕ್ಷಕ ಜಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್. ಅನಂತರಾಜು, ಬಿಂಡೇನಹಳ್ಳಿ ಗುರು, ಗಿರೀಶ್, ಮಂಜುನಾಥ, ವಿವೇಕ್, ಕಿರಣ್, ಅಭಿಜಿತ್, ಸವಿತ, ಪವಿತ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement