ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಅನಾಮಧೇಯರ ಹೆಸರು ಸೇರ್ಪಡೆ: ರಮೇಶ್ ದೂರು

Parashurama
Updated On : 27 Feb 2013, 11:47 am

ಶ್ರೀರಂಗಪಟ್ಟಣ:  ಹೊಸದಾಗಿ ಮತದಾರರನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿ 70ಕ್ಕೂ ಹೆಚ್ಚು ಅನಾಮಧೇಯ ವ್ಯಕ್ತಿಗಳ ಹೆಸರನ್ನು ಸೇರಿಸಲಾಗಿದೆ ಎಂದು ಆರೋಪಿಸಿ 15ನೇ ವಾರ್ಡ್ ಅಭ್ಯರ್ಥಿ ರಮೇಶ್ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಇಲ್ಲಿನ 15 ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಒಟ್ಟು 453 ಮತದಾರರನ್ನು ಹೊಂದಿದೆ. ಹೊಸದಾಗಿ ಸೇರ್ಪಡೆಗೊಂಡ ಮತದಾರರ ಪಟ್ಟಿಯನ್ನು ಪಡೆಯುವ ಸಂದರ್ಭಲ್ಲಿ 70ಕ್ಕೂ ಹೆಚ್ಚು ಅನಾಮಧೇಯ ವ್ಯಕ್ತಿಗಳ ಹೆಸರು ಸೇರ್ಪಡೆಗೊಳಿಸಲಾಗಿದೆ. ಅಂಗನವಾಡಿ ಶಿಕ್ಷಕಿಯ ಪರಿಷ್ಕರಣೆ ಪ್ರಕಾರ 40 ರಿಂದ 50 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದೆ. ಚುನಾವಣಾ ಅಧಿಕಾರಿಗಳ ಬಳಿಯಿರುವ ಹೊಸ ಪಟ್ಟಿಯ ಪ್ರಕಾರ 126 ಮತದಾರರ ಹೆಸರು ಸೇರ್ಪಡೆಗೊಂಡಿರುವುದಾಗಿ ಅಭ್ಯರ್ಥಿ ರಮೇಶ್ ಆರೋಪಿಸಿದ್ದಾರೆ.
ಚುನಾವಣಾ ಸಹಾಯಕ ಅಧಿಕಾರಿ ನಾಗೇಶ್, ಚುನಾವಣಾ ಅಧಿಕಾರಿ ತಹಸೀಲ್ದಾರ್ ಅರುಳ್‌ಕುಮಾರ್‌ರೊಂದಿಗೆ ಈ ಕುರಿತು ದೂರು ನೀಡಿದರು. ನಂತರ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪನ್ನು ಸರಿಪಡಿಸುವ ಭರವಸೆ ನೀಡಿದರು.
ಈ ಸಂದರ್ಭ ಬಿಎಸ್‌ಆರ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಗಂಜಾಂ ಶಿವು ಇದ್ದರು.
23 ವಾರ್ಡ್‌ಗಳ 9 ನಾಮಪತ್ರ ತಿರಸ್ಕೃತ
ಮಳವಳ್ಳಿ: ಮಳವಳ್ಳಿ ಪುರಸಭೆ 23 ವಾರ್ಡ್‌ಗಳಿಗೆ ಸಲ್ಲಿಸಿದ್ದ ನಾಮಪತ್ರಗಳಲ್ಲಿ 9ನಾಮಪತ್ರಗಳು ತಿರಸ್ಕೃತಗೊಂಡಿವೆ. ಒಟ್ಟು 147 ಅಭ್ಯರ್ಥಿಗಳು 188 ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 9 ತಿರಸ್ಕೃತಗೊಂಡು, 179 ನಾಮಪತ್ರಗಳು ಉಳಿದಿವೆ ಎಂದು ಪ್ರಕಟಣೆ ತಿಳಿಸಿದೆ.
ಬಿಜೆಪಿಗೆ ಓಂಪ್ರಕಾಶ್ ರಾಜಿನಾಮೆ
ಮಳವಳ್ಳಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಇಲ್ಲಿ ತಾಲೂಕು ಬಿಜೆಪಿ ಮಾಜಿ ಸಂಚಾಲಕ ಓಂಪ್ರಕಾಶ್ ರಾಜಿನಾಮೆ ಸಲ್ಲಿಸಿದ್ದಾರೆ. ಅವರು ಪತ್ರಿಕಾ ಪ್ರಕಟಣೆ ನೀಡಿ, ಬಿಜೆಪಿಯಲ್ಲಿ ಇತ್ತೀಚಿಗೆ ಶಿಸ್ತು, ಬದ್ಧತೆ ಕೊರತೆಯಿಂದಾಗಿ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ತಾಲೂಕು ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement