ಎಪಿಎಂಸಿ ಹರಾಜು ಕಟ್ಟೆ ಕಾಮಗಾರಿ ಪರಿಶೀಲನೆ
ಭಾರತೀನಗರ: ಇಲ್ಲಿಗೆ ಸಮೀಪದ ಗುಡಿಗೆರೆ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ನಿರ್ಮಿಸಲಾಗುತ್ತಿರುವ ಹರಾಜು ಕಟ್ಟೆ ನಿರ್ಮಾಣ ಕಾಮಗಾರಿಗಳನ್ನು ಎಪಿಎಂಸಿ ಅಧ್ಯಕ್ಷೆ ಡಿ.ಬಿ.ಸವಿತಾರಾಜಣ್ಣ ಹಾಗೂ ಸದಸ್ಯರು ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಸಮಿತಿ ಅಧ್ಯಕ್ಷೆ ಡಿ.ಬಿ. ಸವಿತಾ ರಾಜಣ್ಣ ಮಾತನಾಡಿ, ಜಿಪಂ ಅನುದಾನದಲ್ಲಿ 10 ಲಕ್ಷ ಹಾಗೂ ಸಮಿತಿಯ ವತಿಯಿಂದ 4 ಲಕ್ಷ ವೆಚ್ಚದಲ್ಲಿ ಒಂದು ಭಾಗದಲ್ಲಿ ಹರಾಜು ಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಮತ್ತೊಂದು ಭಾಗದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 25 ಲಕ್ಷ ವೆಚ್ಚದಲ್ಲಿ 2 ಹರಾಜುಕಟ್ಟೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕಾಮಗಾರಿ ಕಳಪೆಯಿಂದ ಕೂಡಿರದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು. ಇದೇ ಸಂದರ್ಭ ಕಾರ್ಯದರ್ಶಿ ಎನ್.ಜಿ. ವೆಂಕಟರೆಡ್ಡಿ, ಎಇಇ ಧರ್ಮೇಗೌಡ, ಇ.ಇ. ರುದ್ರೇಶ್ ಕಾಮಗಾರಿ ವೀಕ್ಷಣೆ ಮಾಡಿದರು. ಗುತ್ತಿಗೆದಾರರಾದ ಕೆ.ಎಂ.ಸಿದ್ದಪ್ಪ, ಕೆ.ಎಂ.ಜಯರಾಮು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.