ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಟೆನಿಸ್ ಬಾಲ್ ಕ್ರಿಕೆಟ್: ಎಂ.ಶೆಟ್ಟಿಹಳ್ಳಿ ತಂಡಕ್ಕೆ ಜಯ

Parashurama
Updated On : 27 Feb 2013, 11:45 am

ಶ್ರೀರಂಗಪಟ್ಟಣ:  ಸ್ನೇಹಜೀವಿ ಕ್ರಿಕೆಟರ್ಸ್ ವತಿಯಿಂದ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂ.ಶೆಟ್ಟಹಳ್ಳಿ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಗಳಿಸಿದೆ.
ಕೆ.ಶೆಟ್ಟಹಳ್ಳಿ, ಮರಳಾಗಾಲ, ಸಬ್ಬನಕುಪ್ಪೆ, ದೊಡ್ಡಬ್ಯಾಡರಹಳ್ಳಿ, ಗೌರಿಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು ಸೇರಿದಂತೆ 18ಕ್ಕೂ ಹೆಚ್ಚು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ಶ್ರೀರಂಗಪಟ್ಟಣ, ಎಂ.ಶೆಟ್ಟಹಳ್ಳಿ, ಕೆ.ಶೆಟ್ಟಹಳ್ಳಿ ಮತ್ತು ಮರಳಾಗಾಲ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು.
ಫೈನಲ್ ಪ್ರವೇಶಿಸಿದ ಎಂ.ಶೆಟ್ಟಹಳ್ಳಿ ಮತ್ತು ಕೆ.ಶೆಟ್ಟಹಳ್ಳಿ ತಂಡಗಳು ಗೆಲುವಿಗಾಗಿ ಸೆಣಸಾಟ ನಡೆಸಿದವು. ಮೊದಲು ಬ್ಯಾಟ್ ಮಾಡಿದ ಎಂ.ಶೆಟ್ಟಹಳ್ಳಿ ತಂಡ ನಿಗದಿತ 8 ಓವರ್‌ಗಳಲ್ಲಿ 65 ರನ್ ಗಳಿಸಿತು.  ಕೆ.ಶೆಟ್ಟಹಳ್ಳಿ ತಂಡವನ್ನು 34 ರನ್ನಿಗೆ ಆಲೌಟ್ ಮಾಡುವ ಎಂ.ಶೆಟ್ಟಹಳ್ಳಿ ತಂಡ ಪ್ರಥಮ ಬಹುಮಾನ ಪಡೆಯಿತು. ತಂಡದ ಪರ 41 ರನ್ ಬಾರಿಸಿದ ಮೂರ್ತಿ ಮತ್ತು 6 ವಿಕೆಟ್ ಕಬಳಿಸಿದ ನವೀನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಜಯಿ ತಂಡಗಳು ಕ್ರಮವಾಗಿ ಪ್ರಥಮ 15000, ದ್ವಿತೀಯ 10000 ಮತ್ತು ಪಾರಿತೋಷಕಗಳನ್ನು ಪಡೆದುಕೊಂಡವು. ಗ್ರಾ.ಪಂ. ಸದಸ್ಯ ದೀಪು ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement