2013-14 ಬಜೆಟ್ ಮಾತು
ಕೇಂದ್ರದ ಬಜೆಟ್ ತೀರಾ ನಿರಾಶಾದಾಯಕವಾಗಿದೆ. ಹೊಸತನದಿಂದ ಕೂಡಿಲ್ಲ, ಹಳೇಯದನ್ನೇ ತಿರುವು, ಮುರುವು ಮಾಡಿದ್ದಾರೆ. ಬಡವರ ಮತ್ತು ಜನಸಾಮಾನ್ಯರ ಬಜೆಟ್ ಅಂತೂ ಅಲ್ಲವೇ ಅಲ್ಲ.
- ಮಾದೇಗೌಡ, ಹಳುವಾಡಿ,
ರೈತರಿಗೆ ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುವ ಹಿಂದಿನ ವರ್ಷದ ನಿರ್ಧಾರ ಮುಂದುವರಿಸಿದ್ದಾರೆ. ಇದೊಂದು ಹೊರ ತುಪಡಿಸಿ ರೈತ ಸಮುದಾಯಕ್ಕೆ ಅಷ್ಟಾಗಿ ಸಹಾಯವಾಗಿಲ್ಲ.
- ಬೋಮ್ಮೇಗೌಡ, ವೈ.ಯರಹಳ್ಳಿ, ರೈತ ಮುಖಂಡರು.
ಈ ಬಾರಿಯ ಬಜೆಟ್ನಲ್ಲಿ ಮತ್ತೆ ಸಿಗರೇಟ್ ಪ್ರಿಯರಿಗೆ ಕೈ ಸುಡುವಂತೆ ಮಾಡಿದ್ದಾರೆ. ಸಿಗರೇಟ್ ದರ ಪ್ರತಿ ಬಾರಿ ಏರಿಸುವ ಸರ್ಕಾರ ತಂಬಾಕು ಬೆಳೆಗಾರರ ರಕ್ಷಣೆಗೆ ಯಾವತ್ತೂ ಚಿಂತಿಸಿಲ್ಲ.
- ಸಲೀಂ, ಮಂಡ್ಯ
ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ಈ ಬಾರಿ ಹೆಚ್ಚಿಗೆ ಹಣ ನೀಡಲಾಗಿದೆ. ಆಂಧ್ರ, ಕರ್ನಾಟಕ, ಪಂಜಾಬ್ ರಾಜ್ಯಗಳಿಗೆ ಮಾತ್ರ ಈ ಸೌಲಭ್ಯದ ಲಾಭ ದೊರಕಲಿದೆ.
- ಚೇತನ್, ದುಗ್ಗನಹಳ್ಳಿ ಮಳವಳ್ಳಿ ತಾ.
ಮಹಿಳೆಯರಿಗೆ ಬ್ಯಾಂಕ್ ಆರಂಭಿಸಲು ಬಜೆಟ್ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಹಕಾರ ಕ್ಷೇತ್ರದ ಮೂಲಕ ಮಹಿಳಾ ಬ್ಯಾಂಕ್ಗಳನ್ನು ತೆರೆಯುವುದರಿಂದ ಮಹಿಳೆಯರು ಮತ್ತಷ್ಟು ಆರ್ಥಿಕ ಸುಭದ್ರತೆ ಸಾಧಿಸಲು ಸಾಧ್ಯವಾಗುತ್ತದೆ.
- ಗೀತಾ ಹರೀಶ್, ಶ್ರೀರಂಗಪಟ್ಟಣ
ನಿರ್ಭಯ ಹೆಸರಿನಲ್ಲಿ ಬಜೆಟ್ನಲ್ಲಿ 1000 ಕೋಟಿ ತೆಗೆದಿರಿಸಿರುವುದು ಒಳ್ಳೆದು. ಮಹಿಳೆಯರಿಗೆ ರಕ್ಷಣೆ, ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆಯಾದಾಗ ಮಾತ್ರ ಯೋಜನೆಯು ಸಾರ್ಥಕವಾಗುತ್ತದೆ.
- ನಾಗರೇವಕ್ಕ, ಮಹಿಳಾ ಸಂಘಟನೆ ನಾಯಕಿ
ಈ ಬಾರಿ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸಿಲ್ಲ. ಶ್ರೀಮಂತರಿಗೆ ಮಾತ್ರ ಶೇ. 10ರಷ್ಟು ತೆರಿಗೆ ಹಾಕಿರುವುದು ಸ್ವಾಗತಾರ್ಹ. ಹೊರೆ ಇಲ್ಲದೇ ಇರುವ ಬಜೆಟಟ್ಸಾಮಾನ್ಯರ ಪರವಾಗಿದೆ.
- ಬಸವರಾಜು, ಶ್ರೀರಂಗಪಟ್ಟಣ
ಚಿನ್ನದ ಆಭರಣಗಳಿಗೆ ಹೆಚ್ಚಿನ ತೆರಿಗೆ ವಿಧಿಸದೇ ಇರುವುದು ಮಹಿಳೆಯರಿಗೆ ಹರ್ಷ ತಂದಿದೆ. ಚಿನ್ನ ಸಾಕಷ್ಟು ದುಬಾರಿಯಾಗಿದೆ. ಆ ನಡುವೆಯೂ ತೆರಿಗೆ ತುಸು ಭಾರ ಎನಿಸುತ್ತದೆ. ಅದರ ತಲೆಬಿಸಿ ಈಗ ಕಮ್ಮಿಯಾದಂತಾಗಿದೆ.
- ಸುರೇಶ್, ಶೆಟ್ಟಹಳ್ಳಿ
ಗೃಹ ಸಾಲ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷ - 2.5 ಲಕ್ಷಕ್ಕೆ ಹೆಚ್ಚುವರಿ ಮಾಡಿರುವುದು ಸ್ವಾಗತಾರ್ಹ. ಉದ್ಯೋಗ ಖಾತ್ರಿ ಯೋಜನೆಗೆ 33000 ಕೋಟಿ ನಿಗದಿಪಡಿಸಿರುವುದು ಗ್ರಾಮೀಣ ನಿರುದ್ಯೋಗಿ ಜನರಿಗೆ ಅನುಕೂಲವಾಗಲಿದೆ.
- ಮನು, ಸಾತನೂರು, ಮಂಡ್ಯ
ಚುನಾವಣೆ ದೃಷ್ಟಿಯಿಂದ ತೆರಿಗೆ ಹೊಣೆ ಜಾಸ್ತಿಯಾಗದಂತೆ ನೋಡಿಕೊಂಡಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಬರ ಕಾಣಿಸಿಕೊಂಡಿದ್ದರೂ ಸಹ ರೈತರ ಸಾಲ ಮನ್ನಾ ಮಾಡುವ ಮನಸ್ಸು ಮಾಡಿಲ್ಲ.
- ಬಡಗಲಪುರ ನಾಗೇಂದ್ರ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.