ಜೆಡಿಎಸ್ನಿಂದ ಟಿಕೆಟ್ ಮಾರಾಟ: ಆರೋಪ
ಮೈಸೂರು: ನಗರಪಾಲಿಕೆ ವಾರ್ಡ್ ಸಂಖ್ಯೆ- 50ರ ಜೆಡಿಎಸ್ ಪಕ್ಷದ ಬಿ ಫಾರಂ ಮಾರಾಟ ಆಗಿದೆ ಎಂದು ಜೆಡಿಎಸ್ ಮುಖಂಡ ಎಂ. ಪುಟ್ಟಮಹದೇವಪ್ಪ ಆರೋಪಿಸಿದರು. ಈ ವಾರ್ಡ್ನಲ್ಲಿ ನನಗೆ ಟಿಕೆಟ್ ನೀಡುವುದಾಗಿ ಪಕ್ಷದ ಮುಖಂಡರು ಹೇಳಿದ್ದರು. ಆದರೆ, ಮಹಿಳಾ ಮೀಸಲಾತಿ ಆಗಿದ್ದರಿಂದ ನನ್ನ ಪತ್ನಿಗೆ ನೀಡುವುದಾಗಿ ತಿಳಿಸಿದ್ದ ಮುಖಂಡರು, ಕಡೆ ಕ್ಷಣದಲ್ಲಿ ಪಾಲಿಕೆ ನೌಕರರಾಗಿರುವ ಪ್ರಭುಲಿಂಗಸ್ವಾಮಿ ಎಂಬವರ ಪತ್ನಿ ಜಯಮ್ಮಗೆ ಟಿಕೆಟ್ ನೀಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಸ್ಥಳೀಯ ಮುಖಂಡರು ಹಣ ಪಡೆದು, ಬಿ ಫಾರಂ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನನ್ನ ಪತ್ನಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿದ್ದೇವೆ. ನಾವು ಜೆಡಿಎಸ್ ತೊರೆಯುವುದಿಲ್ಲ. ಬಿ ಫಾರಂ ಮಾರಾಟ ಮಾಡಿರುವವರ ವಿರುದ್ಧ ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಚಂದ್ರಶೇಖರ್, ಶ್ರೀನಿವಾಸ್, ಪ್ರಕಾಶ್, ಪ್ರದೀಪ್ಕುಮಾರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.