ಹಲಗೂರು ಸಮೀಪ ಕಾಡಾನೆ ಪ್ರತ್ಯೇಕ್ಷ
ಹಲಗೂರು: ಇಲ್ಲಿಗೆ ಸಮೀಪದ ಯತ್ತಂಬಾಡಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಒಂಟಿ ಕಾಡಾನೆಯೊಂದು ಕಾಣಿಸಿಕೊಂಡು ಗ್ರಾಮಸ್ಥರು ಭಯಗೊಂಡ ಘಟನೆ ಗುರುವಾರ ನಡೆದಿದೆ. ಯತ್ತಂಬಾಡಿ ಗ್ರಾಮದ ಹೊನ್ನೇಗೌಡ ಸ್ಕೂಟರ್ನಲ್ಲಿ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಸಾಗ್ಯ, ಸರಗೂರು, ಸಾಮಂದಿಪುರ ಮಾರ್ಗವಾಗಿ ಬಂದ ಒಂಟಿ ಸಲಗ ನೋಡಿ ಭಯಗೊಂಡು ಸ್ಕೂಟರ್ ಬಿಟ್ಟು ಪರಾರಿಯಾಗಿದ್ದಾರೆ. ಕಾಡಾನೆ ಈ ಸಂದರ್ಭದಲ್ಲಿ ಸ್ಕೂಟರನ್ನು ಜಖಂ ಗೊಳಿಸಿರುತ್ತದೆ. ಕುಮಾರ್ ಎಂಬುವವರಿಗೆ ಸೇರಿದ ಹಸು ಗಾಯಗೊಳಿಸಿದೆ. ನಂತರ ಅದೇ ಮಾರ್ಗವಾಗಿ ಕಂಚನಹಳ್ಳಿ ಗುಡ್ಡದ ಕಡೆ ಹೊರಟ ಬಗ್ಗೆ ಶಂಕಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.