ಮಂಡ್ಯ

ನೀರು ಶುದ್ಧೀಕರಣ ಘಟಕ

ಮಂಡ್ಯ: ಗ್ರಾಮೀಣ ಪ್ರದೇಶಗಳ ಜನರಿಗೆ ಶುದ್ಧ ಕುಡಿವ ನೀರು ಪೂರೈಸುವ ಉದ್ದೇಶದಿಂದ ರಾಜ್ಯದ ಆರು ಜಿಲ್ಲೆಗಳಲ್ಲಿ ರಿವರ್ಸ್ ಓಸ್ಮಾಸಿಸ್ ತಂತ್ರಜ್ಞಾನದಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹಳ್ಳಿಯ ಜನವಸತಿ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಸ್ಥಾಪಿಸುತ್ತಿರುವ ಈ ಶುದ್ಧೀಕರಣ ಘಟಕಗಳಿಗೆ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಾಲ್ಕು ಖಾಸಗಿ ಕಂಪನಿಗಳು 50:50 ರ ಅನುಪಾತದಲ್ಲಿ ವೆಚ್ಚ ಭರಿಸಲಿದೆ.
ಹೈದರಾಬಾದ್ ಮೂಲದ ವಾಟರ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಾಟರ್ ಲೈಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸ್ಮಾಟರ್ ಆಕ್ವಾ ಪ್ರೈವೇಟ್ ಲಿಮಿಟೆಡ್ ಹಾಗೂ ಹಿಂದೂಪುರದ ಸಾಯಿ ವಾಟರ್ ಟ್ರೀಟ್‌ಮೆಂಟ್ ಪ್ರೈ. ಲಿಮಿಟೆಡ್ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಮಂಡ್ಯ, ತುಮಕೂರು, ರಾಯಚೂರು, ಗದಗ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯ 200 ಗ್ರಾಮಗಳಲ್ಲಿ ಶುದ್ಧೀಕರಣ ಘಟಕಗಳನ್ನು 13ನೇ ಹಣಕಾಸು ಯೋಜನೆಯಡಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಸಿದ್ಧತೆಗಳು ತ್ವರಿತಗತಿಯಲ್ಲಿ ಸಾಗಿದೆ.  
ಈ ಘಟಕಗಳನ್ನು ಸ್ಥಾಪನೆ ಮಾಡುವ ಪ್ರದೇಶಗಳಲ್ಲಿ ಮೊದಲು ನೀರಿನ ಮಾದರಿ ಪರೀಕ್ಷಿಸಲಾಗುತ್ತದೆ. ಅದರಲ್ಲಿ ಪ್ಲೋರೈಡ್‌ನಂತಹ ರಾಸಾಯನಿಕ ಅಂಶಗಳು ಐಎಸ್-10500,1991ರ ಅನ್ವಯ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿ ಕಂಡುಬಂದಲ್ಲಿ ಅಂತಹ ಪ್ರದೇಶಗಳಲ್ಲಿ ಘಟಕ ಸ್ಥಾಪಿಸುವಂತೆ ನಿರ್ದೇಶನ ನೀಡಲಾಗಿದೆ.
ಹಳ್ಳಿಯಲ್ಲಿ ಸ್ಥಾಪನೆಯಾಗುವ ಈ ಘಟಕಗಳನ್ನು ಖಾಸಗಿ ಕಂಪನಿಗಳೇ 10 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು. ನಿರ್ವಹಣೆ ವೆಚ್ಚವನ್ನು ಬಳಕೆದಾರರಿಂದ ವಸೂಲಿ ಮಾಡಲು ಸೂಚಿಸಲಾಗಿದ್ದು, ಇದಕ್ಕಾಗಿ ನೀರಿಗೆ ದರವನ್ನೂ ನಿಗದಿ ಪಡಿಸಲಾಗಿದೆ.
ಅದರಂತೆ ಮೊದಲ 3 ವರ್ಷದ ಅವಧಿಗೆ ಪ್ರತಿ ಲೀಟರ್ ನೀರಿಗೆ 20 ಪೈಸೆ, 4 ರಿಂದ 6 ವರ್ಷದ ಅವಧಿಗೆ ಪ್ರತಿ ಲೀಟರ್‌ಗೆ 30 ಪೈಸೆ ಹಾಗೂ 7 ರಿಂದ 10 ವರ್ಷಗಳವರೆಗೆ 40 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ದರ ನಿಗದಿ ಮಾಡಿದೆ.
ಈಗ ಆರು ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ನದಿ ಹಾಗೂ ಕೆರೆ ಮೂಲಗಳಿಂದ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಲಾಗಿದ್ದರೆ, ಕೆಲವು ಗ್ರಾಮಗಳಿಗೆ ಅಂತರ್ಜಲ ಮೂಲದಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಇಲ್ಲಿ ಪ್ಲೋರೈಡ್ ಸೇರಿದಂತೆ ಇತರೆ ರಾಸಾಯನಿಕಯುಕ್ತ ನೀರು ಲಭ್ಯವಾಗುತ್ತಿರುವುದು ವರದಿಯಾಗಿದೆ.
ಶಾಶ್ವತ ಕುಡಿವ ನೀರಿನ ಯೋಜನೆ ಜಾರಿಗೊಳಿಸಿರುವ ಗ್ರಾಮಗಳ ಪೈಕಿ ಕೆಲವೆಡೆ ಅತಿ ಹೆಚ್ಚು ಪ್ರಮಾಣದ ಫ್ಲೋರೈಡ್ ಅಂಶ ಪತ್ತೆಯಾದ ಕಾರಣ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು. ಉಳಿದ ಕಡೆಗಳಲ್ಲೂ ಲಭ್ಯತೆಯ ಆಧಾರದ ಮೇಲೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಪಂಚಾಯತ್‌ರಾಜ್ ಇಲಾಖೆ ಸಜ್ಜಾಗಿದೆ.
ಈಗಾಗಲೇ ಆರು ಜಿಲ್ಲೆಗಳ ಗ್ರಾಮಗಳಲ್ಲಿ ಘಟಕಗಳ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದ್ದು, ಕೆಲವೆಡೆ ಮಾತ್ರ ಭೂಮಿಯ ತೊಂದರೆ ಎದುರಾಗಿದೆ. ಹಾಗಾಗಿ ಜನರಿಗೆ ಶುದ್ಧ ಕುಡಿವ ನೀರು ಒದಗಿಸುವ ಉದ್ದೇಶದಿಂದ ಘಟಕಗಳಿಗಾಗಿ ಅಗತ್ಯ ಭೂಮಿಯನ್ನು ಶೀಘ್ರವಾಗಿ ಒದಗಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
- ಎಂ.ಅಫ್ರೋಜ್‌ಖಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!