ಸುವರ್ಣ ಗ್ರಾಮೋದಯಕ್ಕೆ 24 ಗ್ರಾಮಗಳು ಆಯ್ಕೆ
ಕೆ.ಆರ್.ಪೇಟೆ: 5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಗೆ ತಾಲೂಕಿನ 24 ಗ್ರಾಮಗಳು ಆಯ್ಕೆಯಾಗಿದೆ. ಸರ್ಕಾರ ಇದಕ್ಕಾಗಿ 6.46 ಕೋಟಿಯನ್ನು ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಬಿ. ಚಂದ್ರಶೇಖರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುವರ್ಣ ಗ್ರಾಮೋದಯ ಯೋಜನೆಗೆ ಆಯ್ಕೆಯಾಗಿರುವ ಗ್ರಾಮಗಳ ವಿವರ ನೀಡಿ ಕಾಮಗಾರಿಗಳನ್ನು ಆರಂಭಿಸಲು ಗ್ರಾಮ ಪಂಚಾಯಿತಿ ಆಡಳಿತವು ಮುಂದಾಗಬೇಕು ಎಂದರು.
ತಾಲೂಕಿನ ಅಗ್ರಹಾರಬಾಚಹಳ್ಳಿ 48.9ಲಕ್ಷ, ಆನೆಗೊಳ 27.23 ಲಕ್ಷ, ದೊಡ್ಡತಾರಹಳ್ಳಿ 35.60 ಲಕ್ಷ, ಮರುವನಹಳ್ಳಿ 16.9 ಲಕ್ಷ, ಉಯ್ಗೋನಹಳ್ಳಿ 12.1 ಲಕ್ಷ, ಹೆಮ್ಮನಹಳ್ಳಿ 26.80 ಲಕ್ಷ, ಚಟ್ಟಂಗೆರೆ 30.60 ಲಕ್ಷ, ಕೋಡಿಹಳ್ಳಿ 11.46 ಲಕ್ಷ, ಮಾವಿನಕೆರೆ 35.53 ಲಕ್ಷ ಹಣ ಬಿಡುಗಡೆಯಾಗಿದೆ ಎಂದರು.
ದೊಡ್ಡಗಾಡಿಗನಹಳ್ಳಿ 36.13 ಲಕ್ಷ, ಮತ್ತೀಕೆರೆ 13.81 ಲಕ್ಷ, ಮಾಚಗೋನಹಳ್ಳಿ 19.39 ಲಕ್ಷ, ಹರಳಹಳ್ಳಿ 27.80 ಲಕ್ಷ, ಮೈಲನಹಳ್ಳಿ 17.02 ಲಕ್ಷ, ಸಾರಂಗಿ 36.61 ಲಕ್ಷ, ಜಾಗಿನಕೆರೆ 25.90 ಲಕ್ಷ, ಕುಂದೂರು 34.41 ಲಕ್ಷ, ಕೊರಟೀಕೆರೆ 30.53 ಲಕ್ಷ, ಆಲೇನಹಳ್ಳಿ 34.91 ಲಕ್ಷ, ಮಂ.ಹೊನ್ನೇನಹಳ್ಳಿ 24.85 ಲಕ್ಷ, ಚೋಕನಹಳ್ಳಿ 18.54 ಲಕ್ಷ, ಬೊಮ್ಮಲಾಪುರ 13.24 ಲಕ್ಷ, ಬಳ್ಳೇಕೆರೆ 31.78 ಲಕ್ಷ, ಐಕನಹಳ್ಳಿ 37.58 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಗ್ರಾಮಗಳಿಗೆ ಬಿಡುಗಡೆಯಾಗಿರುವ ಒಟ್ಟು 6.46ಕೋಟಿ ಹಣದಲ್ಲಿ ಶೇ.70ರಷ್ಟು ಹಣವನ್ನು ಗ್ರಾಮಗಳ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ, ಶೇ.15ರಷ್ಟು ಗ್ರಂಥಾಲಯ ಅಭಿವೃದ್ಧಿಗೆ, ಶೇ.10ರಷ್ಟು ಅಂಗನವಾಡಿ ಅಭಿವೃದ್ಧಿಗೆ, ಶೇ.3ರಷ್ಟು ಘನತ್ಯಾಜ್ಯ ನಿರ್ವಹಣೆಗೆ, ಶೇ.2ರಷ್ಟು ಸೋಲಾರ್ ದೀಪ ಅಳವಡಿಕೆಗೆ ಬಳಸಬೇಕು ಎಂದರು.
ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರು ಸರ್ಕಾರ ಮೀಸಲು ಮಾಡಿರುವಂತೆಯೇ ಆಯಾಯ ಕಾಮಗಾರಿಗಳನ್ನು ಕೈಗೊಳ್ಳಲು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮಗಳ ಅಭಿವಣದ್ಧಿಯಲ್ಲಿ ರಾಜಕೀಯವನ್ನು ಮರೆತು ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುವಂತೆ ಕಿವಿ ಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಕೆ.ರುಕ್ಮಾಂಗದ, ಎ.ಆರ್.ರಾಜಾನಾಯಕ್, ಕೆ.ಬಿ.ಈಶ್ವರಪ್ರಸಾದ್, ಎ.ಎಸ್.ರಮೇಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.