ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಮಾತೃ ಹೃದಯೀ ಬಾಲಗಂಗಾಧರನಾಥಶ್ರೀ ಅನೇಕರ ಆಶಾಕಿರಣ

Parashurama
Updated On : 28 Jan 2013, 12:15 pm

ನಾಗಮಂಗಲ: ಸಾಧು-ಸಂತರ, ದೀನ-ದಲಿತರ, ರೈತಾಪಿ ವರ್ಗದ ಆಶಾಕಿರಣವಾಗಿದ್ದ ಶಿವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ತಾಯಿ ಹೃದಯವಂತಿಕೆ ಹೊಂದಿದ್ದರು ಎಂದು ಮಾಯಸಂದ್ರ ಶಾಖಾ ಮಠ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಶ್ರೀಗಳ ಭಕ್ತ ವೃಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾಯಿ ಮಮತೆ ಎನ್ನುವುದು ಅತ್ಯಂತ ದೊಡ್ಡದು. ಶ್ರೀಗಳು ಎಲ್ಲರಲ್ಲೂ ಅತೀವ ತಾಯಿ ಮಮತೆಯನ್ನು ತೋರುತ್ತಿದ್ದರು ಎಂದರು.
ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಧಾರ್ಮಿಕ ಲೋಕದ ಮಹಾನ್ ಗುರು ಆದಿಶ್ರೀಗಳು. ಮಠದ ಪೀಠಾಧ್ಯಕ್ಷರಾದ ನಂತರ ಅವರ ಒಡನಾಡಿಯಾಗಿ ಬೆಳೆದ ನಾವುಗಳು ಅವರಲ್ಲಿ ಕಂಡಿದ್ದು ಅಪಾರವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಮಠ ಎಂದರೆ ಯಾವ ಜಾತಿಯದು ಎನ್ನುವ ಕಾಲದಲ್ಲಿ ಜಾತ್ಯತೀತ ಸಮಾಜ ಸುಧಾರಣೆಗೆ ಏನನ್ನಾದರೂ ಸಾಧಿಸಬೇಕೆಂಬ ಛಲ ಅವರಲ್ಲಿತ್ತು. ಅಂತೆಯೇ ಜಾತಿರಹಿತ ವ್ಯವಸ್ಥೆಗೆ ಹಗಲಿರುಳು ದುಡಿದ ಮಹಾ ಮಾನವತಾವಾದಿ ಎಂದರು.
ದೇಶ ದಾಟಿದ ಶಾಖಾ ಮಠಗಳು: 25ಕ್ಕೂ ಹೆಚ್ಚು ಸಂತರನ್ನು ಹುಟ್ಟು ಹಾಕಿದ ಸಂತ ಶ್ರೇಷ್ಠ ಗುರು ಬಾಲಗಂಗಾಧನಾಥ ಶ್ರೀಗಳು. ರಾಜ್ಯದ ಎಲ್ಲಾ ಜಿಲ್ಲೆಗಳು, ಹೊರ ರಾಜ್ಯಗಳು, ಹೊರ ದೇಶಗಳೂ ಸೇರಿದಂತೆ 30ಕ್ಕೂ ಹೆಚ್ಚು ಶಾಖಾ ಮಠಗಳನ್ನು ಸ್ಥಾಪಿಸಿ ಸಮಾಜ ಮುಖಿ ಕೆಲಸ ಮಾಡಲು ಆಶೀರ್ವದಿಸಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ತಹಶೀಲ್ದಾರ್ ಎಸ್.ಎಂ.ಶಿವಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಪಿ.ಶಿವನಂಜೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ,  ದಲಿತ ಮುಖಂಡ ಎಂ. ನಾಗರಾಜಯ್ಯ,  ಅಹಿಂದ ಮುಖಂಡ ಮಂಜೇಗೌಡ ಶ್ರೀಗಳ ಕುರಿತು ಮಾತನಾಡಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ, ಬಿಜೆಪಿ ಬ್ಲಾಕ್ ಘಟಕದ ಅಧ್ಯಕ್ಷ ಪಾರ್ಥಸಾರಥಿ, ಪುಟ್ಟಮ್ಮ, ಜಿಪಂ ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸ್, ಜಿಪಂ ಸದಸ್ಯ ಚಂದ್ರೇಗೌಡ, ಡಿ. ಮೇಲಗಿರಿಗೌಡ, ರಾಜಮ್ಮ  ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments