ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

'ರಾಜಕಾರಣಿಗಳಿಂದ ಪ್ರಕೃತಿ ಸಂಪತ್ತು ಕೊಳ್ಳೆ'

Parashurama
Updated On : 28 Jan 2013, 12:15 pm

ಮಂಡ್ಯ: ರಾಜಕಾರಣಿಗಳು ಪ್ರಕೃತಿ ಸಂಪತ್ತನ್ನು ಲೂಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೋರಾಟಗಾರ ಟಪಾಲ್ ಗಣೇಶ್ ಭಾನುವಾರ ಆರೋಪಿಸಿದರು.
ನಗರದ ರೈತ ಸಭಾಂಗಣದಲ್ಲಿ ಯೋಗಿ ನಾರಾಯಣ ಟ್ರಸ್ಟ್ ವತಿಯಿಂದ ನಡೆದ  ಬಲಿಜ ವಾರ್ತೆ 3ನೇ ವರ್ಷದ ವಾರ್ಷಿಕೋತ್ಸವ ಮತ್ತು  ವಧು-ವರರ ಸಮಾವೇಶ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಸಂಪತ್ತನ್ನು ಲೂಟಿ ಮಾಡುವ ರಾಜಕಾರಣಿಗಳಿಗೆ ಕೋಟ್ಯಂತರ ಹಣ ಸಂಪಾದನೆ ಮಾಡಿದರೂ ಜೈಲೂಟ ತಪ್ಪದು ಎಂದರು.
ರಾಜಕಾರಣಿಗಳು ಸ್ವಾರ್ಥಕ್ಕಾಗಿ ಪ್ರಕೃತಿ ಸಂಪತ್ತನ್ನು ಲೂಟಿ ಮಾಡಲು ಅಧಿಕಾರಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಸಾರ್ವಜನಿಕರನ್ನು ಎದುರಿಸಿ ಸಂಪಾದನೆ ಮಾಡುವ ರಾಜಕೀಯ ವ್ಯವಸ್ಥೆ ಅವ್ಯವಸ್ಥೆಯಾಗಿದೆ. ಇದರ ವಿರುದ್ಧ ಪ್ರತಿಯೊಬ್ಬರು ಧ್ವನಿಯೆತ್ತಿ ಹೋರಾಟ ನಡೆಸಬೇಕು ಎಂದರು.
ಸಮಾಜದ ಬೆಳವಣಿಗೆಗೆ ಸಮುದಾಯಕ್ಕೊಬ್ಬ ನಾಯಕ, ಗುರುಪರಂಪರೆ ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಲಿಜರು ಸಂಘಟಿತರಾಗಬೇಕು ಎಂದು ಟಪಾಲ್ ಗಣೇಶ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನೆ ಮುಖಂಡ ಕೆ.ಎನ್. ವಿಜಯ ಕೊಪ್ಪ ಮಾತನಾಡಿ, ಸಮುದಾಯದ ಜನರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಉದ್ಯೋಗ, ಉದ್ದಿಮೆಯಲ್ಲಿ ಬೆಳೆಯಲು ಸಹಕಾರ ನೀಡಬೇಕು. ಪ್ರತಿಯೊಬ್ಬರು ಉದ್ಯೋಗ ಪಡೆಯುವತ್ತಾ ಗುರಿ ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ನಾರಾಯಣಮ್ಮ, ರವಿನಾಯ್ಡು, ನಾಗೇಶ್, ನಂಜುಂಡಸ್ವಾಮಿ, ಎಂ.ವಿ. ಶ್ರೀನಿವಾಸ್, ಗುರುಮೂರ್ತಿ, ಬಳ್ಳಾರಿ ಏಕಾಂಬಿಕ, ಪ್ರಮೀಳಾ ನಾಯಕ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments