ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಆದಿಶ್ರೀ ಪುಣ್ಯಾರಾಧನೆಗೆ ಚಾಲನೆ

Parashurama
Updated On : 29 Jan 2013, 12:09 pm

ಆದಿಚುಂಚನಗಿರಿ/ಮಂಡ್ಯ: ಆರೋಗ್ಯ, ಅಕ್ಷರ, ಅನ್ನ ದಾಸೋಹಿ ಶಿವೈಕ್ಯ ಜಗದ್ಗರು ಡಾ. ಬಾಲಗಂಗಾಧರನಾಥ ಶ್ರೀಗಳ ಪುಣ್ಯಾರಾಧನೆ ಮಹೋತ್ಸವದ ಸಂತ ಸಂಗಮದಲ್ಲಿ ಭಾರತದ ಶ್ರೇಷ್ಠ ಸಂತರು ಶ್ರೀಗಳ ಸೇವಾ ಕಾರ್ಯವನ್ನು ಸೋಮವಾರ ಕೊಂಡಾಡಿದರು.
ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಭಾರತದ ಅಷ್ಟ ದಿಕ್ಕುಗಳಿಂದಲೂ  ಆಗಮಿಸಿದ್ದ ಶತಕಕ್ಕೂ ಹೆಚ್ಚು ಸಂತರು, ಋಷಿ ದಿಗ್ಗಜರು, ಪೀಠಾಧ್ಯಕ್ಷರು, ಶ್ರೀಗಳ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಭವ, ಗುರುಗಳ ಸೇವಾ ಕಾರ್ಯ ಇತ್ಯಾದಿಗಳನ್ನು ಶ್ಲಾಘಿಸಿದರು.
ಆದಿಚುಂಚನಗಿರಿಯ ನೂತನ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಿದ ಸಂತ ಸಂಗಮ ಕಾರ್ಯಕ್ರಮದಲ್ಲಿ ಪತಂಜಲಿ ಯೋಗಗುರು ಬಾಬಾ ರಾಮ್‌ದೇವ್, ಗೋರಖ್‌ಪುರದ ಆದಿತ್ಯಾನಾಥ ಸ್ವಾಮಿ, ಪರಮಾನಂದ ಸರಸ್ವತಿ ಮಹಾಸ್ವಾಮಿಗಳು, ಹರ್ಷವಿದ್ಯಾಪೀಠ ರಾಜ್‌ಕೋಟ್, ಮುಂಬೈನ ವಿಶ್ವೇಶ್ವರಾನಂದ ಮಹಾರಾಜ್, ಪೇಜಾವರದ ವಿಶ್ವೇಶ್ವರ ತೀರ್ಥ ಶ್ರೀಗಳು, ಸುತ್ತೂರಿನ ದೇಶಿಕೇಂದ್ರ ಮಹಾಸ್ವಾಮಿಗಳು, ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು, ಸಿರಿಗೆರೆ ತರಳುಬಾಳು ಡಾ. ಶಿವಮೂರ್ತಿಶಿವಚಾರ್ಯ ಸ್ವಾಮಿಗಳು, ಏಜಾಸುದ್ದೀನ್, ಫಾದರ್ ನರೋನಾ ಸೇರಿದಂತೆ ಶತಕಕ್ಕೂ ಹೆಚ್ಚು ಹರಗುರುಚರಮೂರ್ತಿಗಳು, ಮೂಡಬಿದರೆಯ ಭಂಡಾರಕ ಚಾರುಕೀರ್ತಿ ಪಂಡಿತಾಚಾರ್ಯ ಸೇರಿದಂತೆ ಸಾಧು ಸಂತರು ಪಾಲ್ಗೊಂಡಿದ್ದರು.
ರಾಜಕೀಯ ನಾಯಕರ ಆಗಮನ: ಸಂತ ಸಂಗಮದಲ್ಲಿ ಕೇವಲ ಋಷಿಮನಿಗಳು, ಸಾಧು ಸಂತರಿಗೆ ಮಾತ್ರ ಮೊದಲ ದಿನದ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದರೂ ವೇದಿಕೆಯಲ್ಲಿ ಅನೇಕ ರಾಜಕಾರಣಿಗಳು ಸುಳಿದಾಡಿದರು.
ಸಂತರ ಸಂಗಮದಲ್ಲಿ ಉತ್ತರ ಪ್ರದೇಶ, ದೆಹಲಿ, ಆಂಧ್ರ, ತಮಿಳುನಾಡು, ರಾಜಸ್ಥಾನ್, ಗುಜರಾತ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸನ್ಯಾಸಿಗಳು ಆದಿಚುಂಚನಗಿರಿಯ ತ್ರಿವಿಧ ದಾಸೋಹಿ, ಅನ್ನ, ಅಕ್ಷರ, ಆರೋಗ್ಯ ನೀಡಿದ ಮಹಾಸಂತ ಶಿರೋಮಣಿ, ಯುಗ ಪುರುಷ, ದಿನದಯಾಳು ಡಾ.ಬಾಲಗಂಗಾಧನಾಥ ಶ್ರೀಗಳಿಗೆ ಭಕ್ತಿ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments