ಆದಿಚುಂಚನಗಿರಿ ಶ್ರೀ ಆರಾಧನೆ
ಕಿಕ್ಕೇರಿ: ಪಟ್ಟಣದಲ್ಲಿ ಮೊಟ್ಟೆ ಮಂಜು, ಜಿ.ಎಂ. ಸುನಿಲ್‌ಕುಮಾರ್, ಮದನಿ ಗೆಳೆಯರ ಬಳಗ ಹಾಗೂ ಲಕ್ಷ್ಮೀದೇವಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರು ಶ್ರದ್ಧಾ- ಭಕ್ತಿಯಿಂದ ಆದಿಚುಂಚನಗಿರಿಶ್ರೀಗಳ ಪುಣ್ಯತಿಥಿ ಆಚರಿಸಿದರು. ಯುವಕರು ಸಮಾನ ಮನಸ್ಸಿನಿಂದ ಆಧ್ಯಾತ್ಮಿಕ, ಜ್ಞಾನ, ಅಕ್ಷರ, ಅನ್ನದಾಸೋಹ ಗುರುಗಳಾದ ಚುಂಚಶ್ರೀಗಳ ಆದರ್ಶ ಯುವ ಜನತೆಗೆ ಮಾದರಿಯಾಗಿದೆ. ಅವರ ಪುಣ್ಯ ಸ್ಮರಣೆ ಕಾರ್ಯವನ್ನು ಮಾಡುವುದೇ ತಮಗೆ ಪುಣ್ಯವಾಗಿದೆ ಎಂದು ಗೆಳೆಯರ ಬಳಗದವರು ಸಂತಾಪ ಸೂಚಿಸಿ, ಭಕ್ತಿಪೂರ್ವಕವಾಗಿ ಸ್ಮರಿಸಿದರು. ಪುಣ್ಯತಿಥಿಯ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಜಿ.ಎಂ.ಸುನಿಲ್‌ಕುಮಾರ್, ಮದನಿ, ಬೇಕರಿ ಸೋಮಣ್ಣ, ಆಟೋ ಚಾಲಕರಾದ ನಾಗಣ್ಣ, ರಾಜಣ್ಣ, ಶ್ರೀನಾಥ್, ಮಂಜೇಗೌಡ, ನಾಗೇಶ್, ಗಿರೀಶ್, ಕುಮಾರ್, ಶ್ರೀಕಾಂತ, ಗುಂಡ, ರಾಜೇಶ್, ಸ್ವಾಮಿ ಇತರರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.