ಎಲ್ಲ ಗ್ರಾಮಕ್ಕೂ ಮೂಲ ಸೌಲಭ್ಯ ಸಿಗಲಿ: ರಾಜೇಶ್
ಮಳವಳ್ಳಿ: ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಪ್ರತಿ ಗ್ರಾಮಕ್ಕೊಂದು ಆಸ್ಪತ್ರೆ, ವಿದ್ಯಾರ್ಥಿನಿಲಯ, ಕ್ರೀಡಾಂಗಣ, ಶೌಚಾಲಯ, ಶಾಲೆ ತೆರೆದು ಯುವ ಪೀಳಿಗೆಯನ್ನ ವಿದ್ಯಾವಂತರನ್ನಾಗಿ ಸ್ವಾಭಿಮಾನಿ ಬದು ರೂಢಿಸಿಕೊಳ್ಳುವಂತೆ ಮಾಡುವುದು ನಾಯಕರಾದವರ ಕರ್ತವ್ಯ ಎಂದು ತಾಲೂಕು ದಂಡಾಧಿಕಾರಿ ಎಂ. ಆರ್. ರಾಜೇಶ್ ತಿಳಿಸಿದರು.
ಶನಿವಾರ ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕಮ್ಮ ತಾಯಿ ದೇವಾಲಯ ಸೇವಾ ಸಮಿತಿ ಆಯೋಜಿಸಿದ್ದ ದೇವರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮ್ಮನೋಹರ್ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ. ಎಸ್. ಶಿವಣ್ಣ ಮಾತನಾಡಿ, ಚೊಟ್ಟನಹಳ್ಳಿ ಗ್ರಾಮದ ಲಿಂಗಣ್ಣ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗಿದ್ದು, ಬಹುಮುಖ ಪ್ರತಿಭೆ ಹೊದಿರುವ ಅವರು ಹಿಂದುಳಿದ ವರ್ಗದ ಶೊಷಿತ ವರ್ಗದಲ್ಲಿ ಜನಿಸಿ ಲಿಮ್ಕಾ ದಾಖಲೆಯ ಜೊತೆಗೆ ಗಿನ್ನೆಸ್ ರೆಕಾರ್ಡ್ನಲ್ಲಿ ನಾಮನಿರ್ದೇಶನವಾಗಿರುವ ಇವರು ತಾಲೂಕಿನ ಹೆಮ್ಮೆಯ ಪುತ್ರನಾಗಿದ್ದಾರೆ ಎಂದು ಪ್ರಶಂಸಿಸಿದರು.
ಸಮಾಜ ಸೇವಕ ಡಾಬ ಸೋಮಣ್ಣ, ದೇವಸ್ಥಾನದ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುವ ಭರವಸೆ ವ್ಯಕ್ತಪಡಿಸಿದರು. ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿದ ಬಿ. ಎಸ್. ಶಿವಣ್ಣ, ತಾಲೂಕು ದಂಡಾಧಿಕಾರಿ ರಾಜೇಶ್ ಅಗಸನಪುರ, ಎ. ಬಿ. ಬಸವರಾಜ್, ಚೆನ್ನಪಿಳ್ಳೇಕೊಪ್ಪಲು ಸಿದ್ದೇಗೌಡ, ದೊಡ್ಡಯ್ಯ, ಪತ್ರಕರ್ತ ಎಂ. ಟಿ. ಶಿವಕುಮಾರ್, ಸಿದ್ದರಾಜು, ರಮೇಶ್, ಮಹದೇವಸ್ವಾಮಿ, ರಾಮಕೃಷ್ಣಯ್ಯ, ರಾಚಯ್ಯ, ಮರೀಗೌಡ, ಎಂ. ಡಿ. ಉಮೇಶ್, ಮಹದೇವು ಅವರನ್ನು ಸನ್ಮಾನಿಸಲಾಯಿತು. ಸೇವ ಸಮಿತಿಯ ಅಧ್ಯಕ್ಷ ವಿ ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಿ. ಪಿ. ರಾಜೇಗೌಡ ಪ್ರಾರ್ಥಿಸಿದರು. ದೇವಾಲಯ ಸೇವಾ ಸಮಿತಿಯ ಎಸ್. ನಾಗರಾಜ್ ಸ್ವಾಗತಿಸಿ, ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.