ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಮುಗಿಲು ಮುಟ್ಟಿದ ಜಯಘೋಷ

Parashurama
Updated On : 29 Jan 2013, 10:50 am

ಆದಿಚುಂಚನಗಿರಿ / ಮಂಡ್ಯ: ಆದಿಶ್ರೀಯವರ ಪುಣ್ಯಾರಾಧನೆಯ ಭಕ್ತ ಸಂಗಮ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಹರಿದು ಬಂದ ಭಕ್ತರು ಲಕ್ಷೋಪಲಕ್ಷ. ಅಗಲಿದ ಜಗದ್ಗುರುವಿಗೆ ನಮನ ಸಲ್ಲಿಸಲು ಕಾಲು ನಡಿಗೆಯಲ್ಲೆ ಮಹಾ ಸಮಾಧಿಯತ್ತ ಆಗಮಿಸಿದ ಲಕ್ಷಾಂತರ ಜನ ಭಕ್ತಿ, ಭಾವಗಳು ಮುಗಿಲು ಮುಟ್ಟುತ್ತಿದ್ದವು.
ಮಂಗಳವಾರ ಬೆಳಗ್ಗೆಯಂತೂ ಆದಿಚುಂಚನಗಿರಿ ಭಕ್ತರ ಗಿರಿಯಾಗಿತ್ತು. ಎಲ್ಲಿ ನೋಡಿದರೂ ಅಲ್ಲಿ ಜನಸಾಗರ. ಮಹಾಸಮಾಧಿ ಬಳಿ ನಮನ ಸಲ್ಲಿಸುವವರು. ಪುಷ್ಪಗುಚ್ಛ ಅರ್ಪಿಸುವವರು, ಹಾಡು ಹೇಳಿ ಭಕ್ತಿಯ ಸುರಿಮಳೆ ಹರಿಸಿದ ಭಕ್ತ ಸಂಮೂಹ ನೋಡಲು 2 ಕಣ್ಣುಗಳು ಸಾಲದಾಗಿತ್ತು.
ಚುಂಚನಗಿರಿಯಿಂದ ಬೆಳ್ಳೂರು ಕಡೆಗೆ ಹೋಗುವ 5 ಕಿಮೀ ದೂರ ಹಾಗೂ ಮಾಯಸಂದ್ರಕ್ಕೆ ಹೋಗುವ 3 ಕಿಮೀ ದೂರದಿಂದಲೇ ವಾಹನ ಸಂಚಾರವನ್ನು ಪೊಲೀಸರು ತಡೆಯೊಡ್ಡಿದ್ದರು. ಹೀಗಾಗಿ ತಾವು ತಂದಿದ್ದ ವಾಹನವನ್ನು ದೂರದಲ್ಲೆ ಬಿಟ್ಟು ಅಲ್ಲಿಂದಲೆ ನಡೆದುಕೊಂಡು ಬರುವುದು ಭಕ್ತರದಾಗಿತ್ತು. ಅಂದಾಜು 5 ಸಾವಿರಕ್ಕೂ ಹೆಚ್ಚು ವಾಹನಗಳು ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದವು.
ಜನ ಕಡಿಮೆ: ಶ್ರೀಗಳ ಮಹಾಸಮಾಧಿಗೆ ಹಾಗೂ ಕಾಲಭೈರವೇಶ್ವರನ ಸನ್ನಿಧಿಗೆ ಹೋಗಿ ಪೂಜೆ, ಪುನಸ್ಕಾರ ಮುಗಿಸಿಕೊಂಡು ಪ್ರಸಾದ ಸ್ವೀಕರಿಸಿ ತಮ್ಮ ಗ್ರಾಮಗಳಿಗೆ ತೆರಳಿದ ಭಕ್ತರು, ಭಕ್ತಿ ಸಂಗಮ ಕಾರ್ಯಕ್ರಮಕ್ಕೆ ಅಷ್ಟಾಗಿ ಆಗಮಿಸಲಿಲ್ಲ. ಹೀಗಾಗಿ ಬೆಳಗ್ಗೆ 10.30ಕ್ಕೆ ನಡೆಯಬೇಕಿದ್ದ ಭಕ್ತ ಸಂಗಮ ಕಾರ್ಯಕ್ರಮ ಸುಮಾರು 2 ಗಂಟೆಗೆ ಆರಂಭವಾಯಿತು.
ಜಿಲ್ಲಾಡಳಿತ ಬೀಡು: ಜಿಲ್ಲಾಧಿಕಾರಿ, ಸಿಇಒ, ಉಪವಿಭಾಗಾಧಿಕಾರಿ, ಜಿಲ್ಲಾ ಎಸ್ಪಿ, ಅಪರ ಎಸ್ಪಿ, ಡಿವೈಎಸ್ಪಿಗಳು ಸೇರಿದಂತೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಕಳೆದ 2 ದಿನಗಳಿಂದ ಆದಿಚುಂಚನಗಿರಿಯಲ್ಲಿ ಬೀಡು ಬಿಟ್ಟು ಭಕ್ತ ಸಂಗಮಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಒಂದು ಹಂತದಲ್ಲಿ ಭಕ್ತ ಸಂಗಮದಲ್ಲಿ ಪಾಲ್ಗೊಂಡಿದ್ದ ರಾಜಕೀಯ ನಾಯಕರಿಗೆ ಇಬ್ಬರು ತಹಸೀಲ್ದಾರ್‌ಗಳು ವೇದಿಕೆಯಲ್ಲಿ ಬಿಸ್ಕೆಟ್‌ಗಳನ್ನು ವಿತರಿಸಿ ಸ್ವಾಮಿ ಸೇವೆಗೈದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments