ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ರಾಮಕೃಷ್ಣ ಮಠಕ್ಕೆ ಜಾಗ ಮಂಜೂರು ಅಕ್ಷಮ್ಯ ಅಪರಾಧ: ಶಾಸಕ ಮಹೇಶ್

Parashurama
Updated On : 29 Jan 2013, 10:24 am

ಮೈಸೂರು:  ಸರ್ಕಾರದ ನಿಯಮ ಮೀರಿ ರಾಮಕೃಷ್ಣ ಮಠಕ್ಕೆ ಇಲಾಖಾ ಜಾಗ ಮಂಜೂರು ಮಾಡಿರುವುದು ಅಕ್ಷಮ್ಯ ಅಪರಾಧ ಎಂದು  ಶಾಸಕ ಸಾ.ರಾ. ಮಹೇಶ್ ಆರೋಪಿಸಿದರು.
ನಗರದ 10 ಕಿಮೀ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಾಗಲಿ ಅಥವಾ ಮಠಗಳಿಗಾಗಲಿ ಭೂಮಿ ನೀಡುವಂತಿಲ್ಲ ಎಂಬ ಸರ್ಕಾರಿ ನಿಯವಿದೆ. ಹೀಗಿದ್ದರೂ ಕಂದಾಯ ನಿಯಮ ಮೀರಿ ಜಿಲ್ಲಾ ಉಸ್ತುವಾರಿ ಸಚಿವ  ರಾಮದಾಸ್ ಅವರು ಎನ್‌ಟಿಎಂಎಸ್ ಶಾಲಾ ಆವರಣ ಮಠಕ್ಕೆ ಮಂಜೂರು ಮಾಡಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮೈಸೂರು ಹೃದಯ ಭಾಗದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿರುವ ಸರ್ಕಾರಿ ಶಾಲೆ ಆವರಣದ 40 ಸಾವಿರ ಅಡಿಯ ಜಾಗವನ್ನು ಕೋಲ್ಕತ್ತ ಬೇಲೂರುಮಠಕ್ಕೆ ಉಚಿತವಾಗಿ ನೀಡಲಾಗಿದೆ. ಇದರ ಮುದ್ರಾಂಕದ ಬೆಲೆ ಸುಮಾರು 16 ಕೋಟಿ, ಮಾರುಕಟ್ಟೆಯ ಬೆಲೆ 40 ಕೋಟಿ ಆಗಿದೆ. ಇಂತಹ ಅಮೂಲ್ಯ ಜಾಗದ ವರದಿಯನ್ನು ಜ.1ರಂದು ತರಿಸಿಕೊಂಡು ಜ.8ರಲ್ಲಿ ಮಂಜೂರು ಮಾಡಿಸಿರುವುದರ ಹಿಂದಿನ ಮರ್ಮವೇನು ಎಂದು ಅವರು ಪ್ರಶ್ನಿಸಿದರು.
ವಿವೇಕಾನಂದರ ಬಗ್ಗೆ, ರಾಮಕೃಷ್ಣ ಮಠದ ಬಗ್ಗೆ ನಮಗೆ ಗೌರವವಿದೆ. ಈ ಸ್ಥಳದಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಸರ್ಕಾರ ನಡೆಸಿದರೆ ನಮ್ಮ ಆಕ್ಷೇಪವಿಲ್ಲ. ಆದರೆ, ರಾಮಕೃಷ್ಣ ಮಠಕ್ಕೆ ಜಾಗ ಕೊಡುವುದಕ್ಕೆ ಆಕ್ಷೇಪವಿದೆ. ಯಾವುದೇ ಕಾರಣಕ್ಕೂ ಮಠಕ್ಕೆ ಜಾಗ ನೀಡಬಾರದು. ಇದರ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಲಿದ್ದೇನೆ. ಕಾನೂನು ಹೋರಾಟ ಮಾಡಲು ಸಿದ್ಧವಿರುವುದಾಗಿ ಅವರು ಎಚ್ಚರಿಸಿದರು.
ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ಎಸ್‌ಬಿಎಂ ಮಂಜು, ಮುಖಂಡರಾದ ಅಯೂಬ್‌ಖಾನ್, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments