ನಾಳೆಯಿಂದ ಆರೋಗ್ಯ ತಪಾಸಣೆ
ಮಂಡ್ಯ: ನಗರದ ವಿ.ವಿ. ರಸ್ತೆಯ ಜನತಾ ಬಜಾರ್ ಕಟ್ಟಡದಲ್ಲಿ ಮಾ.3 ರಂದು ಸಕ್ಕರೆ ಕಾಯಿಲೆ ಮತ್ತು ಅದಕ್ಕೆ ಸಂಬಂಧಪಟ್ಟ ಕಣ್ಣು, ಚರ್ಮ, ಹೃದಯ, ಕೀಲು ಮೂಳೆ, ನರಗಳ ಬಗ್ಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಕಾವೇರಿ ಡಯಾಬಿಟಿಕ್ ಫೌಂಡೇಷನ್, ಕಾವೇರಿ ಚಾರಿಟಬಲ್ ಟ್ರಸ್ಟ್, ಶ್ರೀಸಾಯಿ ಕಣ್ಣಿನ ಆಸ್ಪತ್ರೆ ಹಾಗೂ ಮೈಸೂರು ಬಿಜಿಎಸ್ ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಡಾ.ಕೆ.ರಾಮಚಂದ್ರ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಶಿಬಿರದಲ್ಲಿ ಸಕ್ಕರೆ ಕಾಯಿಲೆ ತಜ್ಞ ಡಾ.ಸುಹಾಸ್ ಗುರ್ಲಹೊಸೂರು, ಕಣ್ಣಿನ ತಜ್ಞ ಡಾ.ಅರವಿಂದ್ ತಿಳ್ಳೆ, ಕೀಲು ಮೂಳೆ ತಜ್ಞ ಡಾ.ಪಂಡರಿನಾಥ್, ಫ್ಯಾಮಿಲಿ ಫಿಜಿಶಿಯನ್ ಡಾ.ಕೃಷ್ಣಮೂರ್ತಿ, ಚರ್ಮರೋಗ ತಜ್ಞ ಡಾ.ಶಶಿಕುಮಾರ್, ರೋಗಶಾಸ್ತ್ರಜ್ಞ ಡಾ.ಮುರುಳಿಧರ್ ಭಟ್ ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭ ಶ್ರೀಸಾಯಿ ಕಣ್ಣಿನ ಆಸ್ಪತ್ರೆಯನ್ನು ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳಿ ಅಧ್ಯಕ್ಷ ಜಿ.ಪಿ.ಪಾಟೀಲ್ ಉದ್ಘಾಟಿಸಲಿದ್ದು, ಫೌಂಡೇಷನ್ ಅಧ್ಯಕ್ಷ ಕೆ.ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀಸಾಯಿ ಕಣ್ಣಿನ ಆಸ್ಪತ್ರೆ ಅಧ್ಯಕ್ಷ ಶಶಿಧರ್ ಸಕ್ಕರೆ ಕಾಯಿಲೆಯಲ್ಲಿ ಕಣ್ಣಿನ ಸಂರಕ್ಷಣೆ ಕಿರುಹೊತ್ತಿಗೆ ಬಿಡುಗಡೆ ಮಾಡುವರು. ಅತಿಥಿಗಳಾಗಿ ಜನತಾ ಬಜಾರ್ ಕಟ್ಟಡ ವ್ಯವಸ್ಥಾಪಕ ರಾಮಲಿಂಗೇಗೌಡ, ಪತ್ರಕರ್ತ ಕೆ.ವಿ.ಕುಮಾರ್ ಭಾಗವಹಿಸಲಿದ್ದಾರೆ ಎಂದು ರಾಮಚಂದ್ರ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.