ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಬ್ರಹ್ಮೇಶ್ವರ ದೇಗುಲ ಗೋಪುರಕ್ಕೆ ಆಲದ ಗಿಡಗಳ ಕಾಟ: ಕಾಳಜಿ ವಹಿಸುವರೇ?

Parashurama
Updated On : 1 Mar 2013, 10:50 am

ಕಿಕ್ಕೇರಿ: ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲ ನೋಡಿದವರು ಮರೆಯದಂತಹ ಸುಂದರ ದೇಗುಲ. ಪ್ರಚಾರದ ಕೊರತೆಯಿಂದ ದೇಗುಲವನ್ನು ಅಪ್ಪಿ ತಪ್ಪಿ ವೀಕ್ಷಿಸಿದ್ದಲ್ಲಿ ತಪ್ಪದೆ ತಮ್ಮೊಂದಿಗೆ ಸ್ನೇಹಿತರ ದಂಡನ್ನೆ ಕರೆದುಕೊಂಡು ಬರುವಂತಹ ಸುಂದರ ಚಿತ್ರಕಲೆಯ ಚಿತ್ತಾರದಿಂದ ಕಂಗೊಳಿಸುವ ದೇಗುಲವಾಗಿದೆ.
ಇಂತಹ ಸುಂದರ ದೇಗುಲದ ನಿರ್ವಹಣೆಯ ಕೊರತೆಯಿಂದ ಗೋಪುರದ ಮೇಲೆ ಹೆಮ್ಮರವಾಗಿ ಆಲದ ಮರದ ಬೇರು ಬೇರು ಬಿಟ್ಟಿದೆ.
ಪಶ್ಚಿಮ, ದಕ್ಷಿಣ ದಿಕ್ಕಿನಲ್ಲಿ ಬೇರು ದೊಡ್ಡದಾಗಿ ತಳವೂರಿದರೆ, ಉತ್ತರ ದಿಕ್ಕಿನ ಗೋಪುರದಲ್ಲಿ ಟಿಸಿಲೊಡೆಯುತ್ತಿದೆ. ಬರುವವರೆಲ್ಲರೂ ಗೋಪುರವನ್ನು ನೋಡಿ ದೇಗುಲಕ್ಕೆ ಅಪಾಯವಾಗುವ ಮುನ್ನ ರಕ್ಷಿಸಿ ಎನ್ನುವುದು ಮಾಮೂಲಿಯಾಗಿದೆ. ಇತ್ತ ರಾಜ್ಯ ಸರ್ಕಾರ ಅತ್ತ ಕೇಂದ್ರ ಸರ್ಕಾರದ ಪ್ರಾಚ್ಯವಸ್ತು ಇಲಾಖೆಗೆ ಸೇರಿದೆಯೋ ಎಂಬುದು ಬಹುತೇಕ ನಾಗರಿಕರ ಜಿಜ್ಞಾಸೆ. ಮಳೆಗಾಲ ಸಮೀಪಿಸುವ ಮುನ್ನ ಹೆಮ್ಮರವಾಗುತ್ತಿರುವ ಆಲದ ಮರದ ಬೇರನ್ನು ಕಿತ್ತು ಶುಚಿಗೊಳಿಸುವರು ಯಾರು ಎಂದು ದೇಗುಲ ದರ್ಶನಕ್ಕೆ ಬರುವ ಭಕ್ತರ ಧ್ವನಿಯಾಗಿದೆ.
ಹಳೆಬೇಡು, ಬೇಲೂರು ದೇಗುಲಗಳ ಸರಿಸಾಟಿಯಾಗುವಂತೆ ವಿವಿಧ ನಾಟ್ಯ ಭಂಗಿಯ ಮದನಿಕೆಯರು, ನಾಟ್ಯ ಗಣಪ, ಉಗ್ರ ನರಸಿಂಹ, ಆನೆ, ಕುದುರೆಯ ಸಾಲುಗಳ ಸಾಲು ಸಾಲು ಎಲ್ಲವೂ ಇರುವ ದೇಗುಲ ಮತ್ತೆ ರೂಪಿಸಲು ಅಸಾಧ್ಯವೆನಿಸುವುದು ಸಹಜ. ಸುಂದರ ಕಪ್ಪು ಶಿಲೆಯಲ್ಲಿ ಅರಳಿ ನಿಂತಿರುವ ಬ್ರಹ್ಮೇಶ್ವರನ ಮೂರ್ತಿ ದೇಶದಲ್ಲಿ ಇಷ್ಟೊಂದು ಸುಂದರವಾಗಿ ಕಾಣಲು ಸಾಧ್ಯವಿಲ್ಲ ಎನ್ನುವುದು ಇತಿಹಾಸಕಾರರ ಅನಿಸಿಕೆ. ಕೋಟ್ಯಂತರ ರು. ವ್ಯಯಿಸಿದರೂ ಇಷ್ಟೊಂದು ಸುಂದರ ದೇಗುಲ ನಿರ್ಮಿಸಲು ಕಷ್ಟಸಾಧ್ಯವಾಗಿರುವಾಗ ಇರುವ ದೇವಾಲಯವನ್ನಾದರೂ ಉಳಿಸಿ ಕೊಳ್ಳಲು ಸಂಬಂಧಪಟ್ಟ ದೇಗುಲ ಟ್ರಸ್ಟ್‌ನವರು ಮುಂದಾಗುವರೆ ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments