ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಗ್ರಹ, ನಕ್ಷತ್ರಗಳ ತಿಳಿವಳಿಕೆ ಇರಲಿ: ಲೋಕೇಶ್

Parashurama
Updated On : 3 Mar 2013, 11:41 am

ನಾಗಮಂಗಲ:  ಜನರು ಖಗೋಳ ವಿಜ್ಞಾನವನ್ನು ಅರಿಯುವ ಮೂಲಕ ಗ್ರಹಗಳ ಮತ್ತು ನಕ್ಷತ್ರಗಳ ಕುರಿತು ನಿಜವಾದ ತಿಳಿವಳಿಕೆಯನ್ನು ಹೊಂದಬೇಕು ಎಂದು ಉಪನ್ಯಾಸಕ ಎಸ್.ಲೋಕೇಶ್ ಹೇಳಿದರು.
ಪಟ್ಟಣದ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗ ತಾಲೂಕು ವಿಜ್ಞಾನ ವೇದಿಕೆ ಹಾಗೂ ಕನ್ನಡ ಸಂಘ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ  ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಿದರು. ಭಾರತೀಯ ಖಗೋಳ ವಿಜ್ಞಾನಿಗಳು ಬಹಳ  ವರ್ಷಗಳ ಹಿಂದೆಯೇ ಗ್ರಹಗಳ ಮತ್ತು ನಕ್ಷತ್ರಗಳ ಕುರಿತು ಅಪಾರ ಅಧ್ಯಯನ ನಡೆಸಿ ಜ್ಞಾನ ಭಂಡಾರವನ್ನು ನೀಡಿದ್ದಾರೆ ಎಂದರು.
ರಾಶಿ ನಕ್ಷತ್ರ ಪುಂಜಗಳ ಪೈಕಿ ವೃಷಭ, ಮಿಥುನ, ಸಿಂಹ, ವೃಶ್ಚಿಕ, ಕರ್ಕಾಟಕ, ಕುಂತಿ ನಕ್ಷತ್ರ ಪುಂಜ, ನೀಹಾರಿಕೆ ಇತ್ಯಾದಿಗಳನ್ನು ಗುರುತಿಸುವ ಕ್ರಮದ ತಿಳಿವಳಿಕೆಯನ್ನು ಜನರು ಮತ್ತು ಮಕ್ಕಳು ಪಡೆದುಕೊಂಡರು. ದೂರದರ್ಶಕದ ಸಹಾಯದಿಂದ ಗುರುಗ್ರಹ ಮತ್ತು ಚಂದ್ರನ ಸಮೀಪ ದರ್ಶನವನ್ನು ಮಾಡಿಸಲಾಯಿತು.
ಎಂ.ಎನ್.ಮಂಜುನಾಥ್, ಕೆ. ನಾಗ ರಾಜು, ಎನ್.ಕೆ. ನರಸಿಂಹಪ್ರಸಾದ್, ಗಿರೀಶ್, ನೆಲಜೇರಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments