ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಸಿದ್ದರಾಜು ಸಾವಿಗೆ ಅನಾರೋಗ್ಯ ಕಾರಣ, ನಾವಲ್ಲ: ಎಚ್‌ಡಿಕೆ

Parashurama
Updated On : 4 Mar 2013, 12:23 pm

ಮಂಡ್ಯ-ಭಾರತೀನಗರ: ಸಿದ್ದ ರಾಜು ಸಾವಿಗೆ ನಮ್ಮ ಕುಟುಂಬ ಕಾರಣವಲ್ಲ. ಅವರಿಗೆ ಇದ್ದ ಕುಡಿತದ ದೌರ್ಬಲ್ಯ ಮತ್ತು ಅನಾರೋಗ್ಯ ಅವರನ್ನು ಸಾವಿನ ಕೂಪಕ್ಕೆ ತಳ್ಳಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಮ್ಮಣ್ಣ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಜು ಸಾವಿಗೂ ನಮ್ಮ ಕುಟುಂಬಕ್ಕೂ ತಾಳೆ ಹಾಕುವ ಪ್ರಯತ್ನ ನಡೆಯಿತು. ಈ ಅಪಪ್ರಚಾರ ವ್ಯವಸ್ಥಿತವಾಗಿ ಮಾಡಲು ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಅವೆಲ್ಲವನ್ನು ನಾನು ಮರೆತು ಅನಾಥ ಸೋದರಿ ಕಲ್ಪನಾ ಅವರ ನೆರವಿಗೆ ನಿಂತೆ. ಶಕ್ತಿ ತುಂಬಿ ಬದುಕಿನ ದಾರಿ ಕಲ್ಪಿಸಿದೆ ಎಂದು ಹೇಳಿದರು. ಸಿದ್ದರಾಜು ಅವರ ಕುಟುಂಬಕ್ಕೆ ನಾನು ಸಾಕಷ್ಟು ಆರ್ಥಿಕ ಸಹಾಯ ನೀಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ, ನಂತರ ಸಂಕಷ್ಟಗಳು ಬಂದಾಗ ನೆರವು ನೀಡಿದ್ದೇನೆ. ಅವೆಲ್ಲವೂ ಈಗ ಗೌಣವಾಗಿದೆ. ಹಣ ಇರುವ ವ್ಯಕ್ತಿಗಳನ್ನು ಪಕ್ಷಕ್ಕೆ ಕರೆತಂದರು. ಕಲ್ಪನಾ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡುತ್ತಾರೆ ಎಂಬ ಭಯ ಕೆಲವರನ್ನು ಕಾಡುತ್ತಿದೆ. ಆದರೆ, ಇಂತಹ ಗೊಂದಲಗಳನ್ನು ಸೃಷ್ಟಿಸುವ ವ್ಯಕ್ತಿಗಳ ಮಾತನ್ನು ಕೇಳದೆ ನನ್ನ ತಂಗಿಯ ಸ್ಥಾನದಲ್ಲಿರುವ ಕಲ್ಪನಾ ಬದಲಾದರೆ ಒಳ್ಳೆಯದು ಎಂದರು.
ಸಿದ್ದರಾಜು ಅವರು ರಾಜಕೀಯ ಮೇಲಾಟ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. 2004ರಲ್ಲಿ 'ಬಿ' ಫಾರಂ ವ್ಯತ್ಯಾಸವಾದ ನಂತರ  ನಡೆದ ಎಲ್ಲಾ ಘಟನೆಗಳನ್ನು ಜನ ಮರೆತಿಲ್ಲ. ಆದರೂ ಕೂಡಾ 2008ರಲ್ಲಿ ಮತ್ತೆ ಟಿಕೆಟ್ ಕೊಟ್ಟು, ಹಣವನ್ನು ಕೊಟ್ಟು ಗೆಲ್ಲುವಂತೆ ಮಾಡಿದೆವು ಇದು ತಪ್ಪಾ. ಇದಕ್ಕಿಂತ ಪ್ರೀತಿ ಅಭಿಮಾನವನ್ನು ಸಿದ್ದರಾಜು ಅವರ ಮೇಲೆ ಈ ಜಿಲ್ಲೆಯಯಾವ ರಾಜಕಾರಣಿಗಳು ತೋರಿಸಿದರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments