ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ವಿವಿಧ ಕಾಮಗಾರಿಗೆ ಶಾಸಕರ ಚಾಲನೆ

Parashurama
Updated On : 19 Mar 2013, 10:42 am

ಕ.ಪ್ರ.ವಾರ್ತೆ ್ಣ ನಾಗಮಂಗಲ ್ಣ ಮಾ. 19
ತಾಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುರೇಶ್‌ಗೌಡ ಚಾಲನೆ ನೀಡಿದರು.
ಹೊಣಕೆರೆ ಹೋಬಳಿ ಗೆಜ್ಜೆಹೊಸಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಸ್‌ಡಿಬಿ ಯೋಜನೆಯಲ್ಲಿ ಉಯ್ಯನಹಳ್ಳಿ ಕೆರೆಗೆ 1 ಕಿಮೀ ರಸ್ತೆ ಕಾಮಗಾರಿ, ಬಿ.ಶ್ರೀರಾಮನಹಳ್ಳಿ ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ರಸ್ತೆಗಳ ಕಾಮಗಾರಿ, ಬಿ.ಶ್ರೀರಾಮನಹಳ್ಳಿ ಗ್ರಾಮದಿಂದ ಬಾಳೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಬ್ರಿಡ್ಜ್ ಕಾಮಗಾರಿ, ಬಾಳೇನಹಳ್ಳಿ ಗ್ರಾಮದ ರಸ್ತೆಗಳ ಕಾಮಗಾರಿ ಹಾಗೂ ಸಿದ್ದನಕಟ್ಟೆಯ ಬ್ರಿಡ್ಜ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಬಿಂಡಿಗನವಿಲೆ ಹೋಬಳಿಯ ಲಾಳನಕೆರೆ ಗ್ರಾಮದಲ್ಲಿ 39 ಲಕ್ಷ ವೆಚ್ಚದಲ್ಲಿ, ಬಿದರಕೆರೆ ಗ್ರಾಮದಲ್ಲಿ 29.48 ಲಕ್ಷ ವೆಚ್ಚದಲ್ಲಿ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗೆ ಚಾಲನೆ, ವಡ್ಡರಹಟ್ಟಿ ಗ್ರಾಮದಲ್ಲಿ 10 ಲಕ್ಷ  ವೆಚ್ಚದ ಎಸ್‌ಸಿಪಿ ಯೋಜನೆಯ ಕಾಮಗಾರಿ, ಕಸಬಾ ಹೋಬಳಿಯ ಮದಲಹಳ್ಳಿ ಗ್ರಾಮದಲ್ಲಿ ರಸ್ತೆಗಳ ಡಾಂಬರಿಕರಣಕ್ಕೆ, ತುಪ್ಪದಮಡು ಗ್ರಾಮದಲ್ಲಿ 12 ಲಕ್ಷ, ಕಲ್ಲುಕೊಂಬರಿ ಗ್ರಾಮದಲ್ಲಿ 10 ಲಕ್ಷ, ನರಗಲು ಕಾಲೋನಿ ಗ್ರಾಮದಲ್ಲಿ 10 ಲಕ್ಷ, ಚಿಕ್ಕೋನಹಳ್ಳಿ ಗ್ರಾಮದಲ್ಲಿ 10 ಲಕ್ಷ, ಪಿ.ನೇರಳಕೆರೆ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಎಸ್‌ಸಿಪಿ ಯೋಜನೆಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ 29.42 ಲಕ್ಷ ವೆಚ್ಚದಲ್ಲಿ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಗ್ರಾಮಗಳಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ ಕಾಮಗಾರಿಗಳು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಗ್ರಾಮಸ್ಥರ ಪಾತ್ರ ಬಹುಮುಖ್ಯವಾಗಿದೆ. ಗುತ್ತಿಗೆದಾರರು ಕಳಪೆ ಕೆಲಸ ಮಾಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments