ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ವ್ಯಕಿಗೆ ತೀವ್ರ ಗಾಯ, ಲಕ್ಷಾಂತರ ರು. ಹಾನಿ

Parashurama
Updated On : 19 Mar 2013, 10:42 am

ಕ.ಪ್ರ.ವಾರ್ತೆ ಮಂಡ್ಯ   ಮಾ. 19
ಆಕಸ್ಮಿಕವಾಗಿ 2 ಗುಡಿಸಲುಗಳಿಗೆ ಬೆಂಕಿ ಬಿದ್ದು 3 ಹಸು ಒಂದು ಬೈಕ್ ಹಾಗೂ ಅಂಗಡಿಯೊಂದು ಸಂಪೂರ್ಣಭಸ್ಮಗೊಂಡು ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಬಳಿ ನಡೆದಿದೆ. ಚಿಕ್ಕರಸಿನಕೆರೆ ಗ್ರಾಮದ ನಿವಾಸಿ ಕೃಷ್ಣಪ್ಪ(45) ಎಂಬುವರೇ ಬೆಂಕಿ ದುರಂತದಲ್ಲಿ 2 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸಿ ಬೆಂಕಿಯಲ್ಲಿ ಗಾಯಗೊಂಡಿರುವ ನತದೃಷ್ಟ.
    ಕಳೆದ ರಾತ್ರಿ 12 ಗಂಟೆ ಸಮಯದಲ್ಲಿ ಮೊದಲು ಕೊಟ್ಟಿಗೆಯ ಗುಡಿಸಿಲಿಗೆ ಬೆಂಕಿ ತಗುಲಿ ನಂತರ ಪಕ್ಕದಲ್ಲಿದ್ದ  ವಾಸದ ಗುಡಿಸಲು ಹಾಗೂ ಪೆಟ್ಟಿಗೆ ಅಂಗಡಿಗೆ ವ್ಯಾಪಿಸಿದ್ದು, ಈ ಬೆಂಕಿ  ದುರಂತದಿಂದಾಗಿ 2 ತೆನೆ ಹಸು ಸೇರಿ 3 ಹಸುಗಳು ಸಜೀವ ದಹನಗೊಂಡು ಬೈಕ್ ಸಂಪೂರ್ಣ ಭಸ್ಮವಾಗಿ ಅಕ್ಕಿ, ರಾಗಿ, ಬಟ್ಟೆ ಸೇರಿದಂತೆ ದಿನಬಳಕೆಯ ವಸ್ತುಗಳು ಆಹುತಿಯಾಗಿವೆ.
   ಗುಡಿಸಲುಗಳಿಗೆ ಬೆಂಕಿ ಬಿದ್ದಿರುವುದನ್ನು ಅರಿತ ಕೃಷ್ಣಪ್ಪ ಹಸುಗಳನ್ನು ರಕ್ಷಿಸಲು ಹೋದಾಗ ತೀವ್ರವಾಗಿ  ಗಾಯಗೊಂಡಿದ್ದಾರೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರೂ ಅಷ್ಟರೊಳಗೆ ಎಲ್ಲಾ ವಸ್ತುಗಳು ಸುಟ್ಟುಹೋಗಿದ್ದವು.
  ಗಾಯಗೊಂಡ ಕೃಷ್ಣಪ್ಪನನ್ನು ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಪರಿಹಾರ ವಿತರಣೆ: ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ 10,000 ರು. ಶಾಸಕಿ ಕಲ್ಪನಾ ಸಿದ್ದರಾಜು 5000 ರು., ವಿಧಾನಪರಿಷತ್ ಮಾಜಿ ಸದಸ್ಯ ಮಧುಮಾದೇಗೌಡ 2000 ರು., ತಾ.ಪಂ ಸದಸ್ಯೆ ಲಲಿತಮ್ಮ ಸೇಟುಸಿದ್ದೇಗೌಡ 2000 ರು. ಗ್ರಾಮದ ಎಂ.ಪಿ.ಸಿ.ಎಸ್ ವತಿಯಿಂದ 2000ರೂ, ಪುರುಷರ ಸ್ವ-ಸಹಾಯ ಸಂಘದ ವತಿಯಿಂದ 2000ರೂಗಳನ್ನು ಬೆಂಕಿಯಲ್ಲಿ ನಷ್ಟಕೊಳಗಾದ ಮನೆಯವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
  ಉಪತಹಶೀಲ್ದಾರ್ ಜೈಕುಮಾರ್, ಗ್ರಾಮಲೆಕ್ಕಾಧಿಕಾರಿ ರಾಮರಾಧ್ಯ, ಪಶುವೈದ್ಯಾಧಿಕಾರಿಗಳಾದ ಸಂತೋಷ್‌ಬಾಬು, ಉಜೀವನ ಪೈನಾಸ್ ಅಶ್ವಿನಿ, ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.
ಒತ್ತಾಯ: ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇದನ್ನು ಗಮನಿಸಿ ಈ ಬಡಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಾರ್ಯಧ್ಯಕ್ಷ ಹೊನ್ನಲಗೆರೆ ವೆಂಕಟೇಶ್, ಮೆಣಸಗೆರೆ ರಾಜಣ್ಣ, ಮುಖಂಡರಾದ ಪಟೇಲ್ ಗಿರೀಶ್, ಜೈಭೀಮ್ ಶಿವಲಿಂಗಯ್ಯ, ಪ್ರಸಾದ್, ಪಟೇಲ್ ಸಿದ್ದರಾಜು, ರಂಗಸ್ವಾಮಿ ಸೇರಿದಂತೆ ಮತ್ತಿತರರು ಒತ್ತಾಯಿಸಿದ್ದಾರೆ.  
   ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸ್‌ಠಾಣೆಯ ವತ್ತ ನಿರೀಕ್ಷಕರಾದ ಗಂಗಾಧರಸ್ವಾಮಿ, ಪಿ.ಎಸ್.ಐ. ಜಗದೀಶ್‌ರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments