ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ವೈಚಾರಿಕ ಕ್ರಾಂತಿಯಿಂದ ಸಮಾನತೆ ಸಾಧ್ಯ

Parashurama
Updated On : 21 Mar 2013, 11:00 am

ಕನ್ನಡಪ್ರಭ ವಾರ್ತೆ ್ಣ ಪಾಂಡವಪುರ ್ಣ ಮಾ.21
ಸಮಾಜದಲ್ಲಿ ವೈಚಾರಿಕ ಕ್ರಾಂತಿ  ಮೂಲಕ ಸಮಾನತೆ ಬದುಕು ನಿರ್ಮಾಣ ಮಾಡಲು ಎಲ್ಲಾ  ಧರ್ಮ ಗುರುಗಳು ಮುಂದಾಗಬೇಕಾಗಿದೆ. ಇಲ್ಲವಾದರೆ ದೇಶದಲ್ಲಿ ನೀತಿ-ಮೌಲ್ಯ ನಾಶವಾಗಿ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ  ಅಭಿಪ್ರಾಯಪಟ್ಟಿದ್ದಾರೆ.  
ತಾಲೂಕಿನ ಚಿನಕುರಳಿ ಹೋಬಳಿ ಬೇಬಿ ಬೆಟ್ಟದ ರಾಮಯೋಗಿಶ್ವರ ಮಠದ ಅವರಣದಲ್ಲಿ ಕರ್ನಾಟಕ ರತ್ನ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಗುರವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
ಸಿದ್ದಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿ ಒಂದು ವರ್ಗಕ್ಕೆ ಮಾತ್ರ ಸಿಮೀತವಾಗಿಲ್ಲ. ಎಲ್ಲಾ ವರ್ಗದ ಜನತೆಗೆ ಅಶಾಕಿರಣರಾಗಿ ದೇಶಕ್ಕೆ ಮಾರ್ಗದರ್ಶಕರಾಗಿದ್ದಾರೆ. ಇವರು ಶಿಕ್ಷಣದ ಮೂಲಕ ಸಮಾಜದಲ್ಲಿ ಹೊಸಕ್ರಾಂತಿ ಸೃಷ್ಟಿಮಾಡಿ  ಅರೋಗ್ಯಕರ ವಾತವರಣ ಸೃಷ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಎಂದು ಪ್ರತಿಪಾದಿಸಿದರು. ಶ್ರೀಗಳು ಬಸವಣ್ಣನವರ ಅನುಯಾಯಿಯಾಗಿ ಹಾಗೂ ಸಮಾಜದ ಪರಿರ್ವತಕರಾಗಿ ವಿಶ್ವವೇ ಮೆಚ್ಚುವಂತೆ ನಿಸ್ವಾರ್ಥತೆಯಿಂದ ಸಮಾಜದ ಚಿಂತಕರಾಗಿ ಸೇವೆ ಸಲ್ಲಿಸಿ ವಿಶ್ವಮಾನರಾಗಿದ್ದಾರೆ ಎಂದು ಕೃಷ್ಣ ನುಡಿದರು.
ಜಾತಿ, ಜಾತಿ ನಡುವೆ ಅಶಾಂತಿ ಉಂಟು ಮಾಡುವ ರಾಜಕೀಯ ಪಕ್ಷಗಳಿಗೆ ನೀತಿ ಬೋಧನೆ ಮಾಡುವ ಮೂಲಕ ಕಡಿವಾಣ ಹಾಕುವ ಶಕ್ತಿ ಧಾರ್ಮಿಕ ಸಂಸ್ಥೆಗಳಿಗೆ ಮಾತ್ರ ಇದೆ. ಈ ನಿಟ್ಟಿನಲ್ಲಿ  ಸಮಾಜದ ಉಳಿವಿಗೆ ಎಲ್ಲಾ ಧರ್ಮಗುರುಗಳು ಸಮಾಜ ಒಡೆಯುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಮೂಲಕ ಶಾಂತಿ ನೆಮ್ಮದಿ ಬದುಕು ನಿರ್ಮಾಣ ಮಾಡಲು ಮುಂದಾಗಬೇಕಾಗಿದೆ
ಎಂದು ಕೃಷ್ಣ ಮನವಿ ಮಾಡಿದರು.
ರೈತನಾಯಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಸಮಾಜದಲ್ಲಿ ಎಲ್ಲಾ ಧರ್ಮ ಗುರುಗಳು ಸಮಾಜದ ಬಗ್ಗೆ ಚಿಂತಕರಾಗಿ ಶಿಕ್ಷಣ ಅನ್ನದಾಸೋಹ ನಮ್ಮ ಸಂಸ್ಕೃತಿ ಪರಂಪರೆ ಉಳಿವಿಗೆ ಚಿಂತನೆ ಮಾಡುತ್ತಾರೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಲುಷಿತ ಗೊಂಡಿರುವ ಸಮಾಜವನ್ನು ಸರಿಪಡಿಸಲು ಎಲ್ಲಾ ಧಾರ್ಮಿಕ ಸಂಸ್ಥೆಯ ಗುರುಗಳು ಇಲ್ಲವಾಗಿದ್ದರೆ, ಸಮಾಜದಲ್ಲಿ ಶಿಕ್ಷಣ ಕ್ರಾಂತಿ ಕಾಣಲು ಸಾಧ್ಯವಾಗುತ್ತಿರಲಿಲ್ಲ ಒಂದು ಸರ್ಕಾರ ಮಾಡುವ ಕೆಲಸವನ್ನು ಧಾರ್ಮಿಕ ಸಂಸ್ಥೆಗಳು ಮಾಡಿ ಸಮಾಜಕ್ಕೆ  ಮಾದರಿಯಾಗಿ ನಿಂತಿವೆ ಎಂದರು.
ಕೊಡ್ಲಿಪೇಟೆ ಶ್ರೀಗಳು ತೋಪಿನ ಮಠದ ಮಹಾಲಿಂಗಸ್ವಾಮಿ,ಕನಕಪುರ ದೇಗುಲ ಮಠದ ಮುಮ್ಮುಡಿ ನಿವಾರಣ ಸ್ವಾಮಿ, ಕೂಡಲಸಂಗಮ ಬಸವಧರ್ಮ ಪೀಠದ ನಿರಂಜನ ಮಾತೆ,  ಮಹಾದೇವಿ ಇನ್ನು ಅನೇಕ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಕೆ.ಕೆಂಪೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಅಣ್ಣೇಗೌಡ, ಚಿಕ್ಕಾಡೆ ಬಸವೇಗೌಡ, ಜಿಪಂ ಮಂಜುಳಾ ಪರಮೆ ಶ್, ಎಸ್.ಎ ಮಲ್ಲೇಶ್, ವೀರಪ್ಪ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments